ರಾಜಸ್ಥಾನದಲ್ಲಿ ಮತದಾನದ ವೇಳೆ ಅಹಿತಕರ ಘಟನೆಗಳೂ ವರದಿಯಾಗಿದೆ. ಇಲ್ಲಿ ಸಿಕಾರ್ ಜಿಲ್ಲೆಯ ಫತೇಪುರ್ ಸುಭಾಷ್ ಶಾಲೆಯ ಮತಗಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಸಂಘರ್ಷಕ್ಕೆ ತಿರುಗಿದೆ. ನಕಲಿ ಮತದಾರರನ್ನು ಮತಗಟ್ಟೆಗೆ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ಗುಂಪುಗಳು ವಾಗ್ವಾದ ಮಾಡಿ, ಆಮೇಲೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಹೇಳಿದ್ದಾರೆ.