ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ಯೆ ಬೇಡ, ಅವಿವಾಹಿತೆ ಪದ ಬಳಸಿ’: ಬಾಂಗ್ಲಾ

Last Updated 27 ಆಗಸ್ಟ್ 2019, 17:06 IST
ಅಕ್ಷರ ಗಾತ್ರ

ಢಾಕಾ: ‘ಮುಸ್ಲಿಂ ವಿವಾಹ ಪ್ರಮಾಣಪತ್ರಗಳಿಂದ ‘ಕನ್ಯೆ’ ಪದ ತೆಗೆಯಬೇಕು’ ಎಂದು ಬಾಂಗ್ಲಾದೇಶದ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.

ಉಲ್ಲೇಖಿತ ಪದ ಬಳಕೆಯು ಅಪಮಾನಕರವಾದುದು ಮತ್ತು ತಾರತಮ್ಯದಿಂದ ಕೂಡಿದ್ದಾಗಿದೆ ಎಂದು ಪ್ರತಿಪಾದಿಸಿದ್ದ ಹೋರಾಟಗಾರರು ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಮುಸ್ಲಿಂ ವಿವಾಹ ಕಾಯ್ದೆ ಅನುಸಾರ ವಧು ಪ್ರಮಾಣಪತ್ರವನ್ನು ಪಡೆಯಲು ಮೂರು ಅಂಶಗಳ ಪೈಕಿ –ಕನ್ಯೆ, ವಿಧವೆ ಅಥವಾ ವಿಚ್ಛೇದಿತೆ–ಒಂದನ್ನು ಆಯ್ಕೆ ಮಾಡಬೇಕಿತ್ತು.

ತನ್ನ ಸಂಕ್ಷಿಪ್ತ ಅದೇಶದಲ್ಲಿ ಕೋರ್ಟ್‌, ‘ಕನ್ಯೆ’ ಪದಕ್ಕೆ ಬದಲಾಗಿ ‘ಅವಿವಾಹಿತೆ’ ಪದವನ್ನು ಬಳಸಬೇಕು ಎಂದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT