ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪುತ್ರಿ ಸೈಮಾ ಭಾರತಕ್ಕೆ

Published 8 ಸೆಪ್ಟೆಂಬರ್ 2023, 13:49 IST
Last Updated 8 ಸೆಪ್ಟೆಂಬರ್ 2023, 13:49 IST
ಅಕ್ಷರ ಗಾತ್ರ

ಕೋಲ್ಕತ್ತ: ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ಪುತ್ರಿ ಸೈಮಾ ವಾಝೆದ್‌ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಡೊನೇಷ್ಯಾದಲ್ಲಿ ಈಚೆಗೆ ನಡೆದ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ರಾಷ್ಟ್ರಗಳ ಶೃಂಗಸಭೆಗೂ ಸೈಮಾ ಅವರು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಜೊತೆಗೆ ತೆರಳಿದ್ದರು. ಅಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಹುದ್ದೆಗೆ ಆಕೆಯ ಉಮೇದುವಾರಿಕೆಯನ್ನು ಘೋಷಿಸಲಾಗಿತ್ತು.

ಇದರಿಂದ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನಲ್ಲಿ ಸೈಮಾ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ತ್ರಿಪುರಾದ ಜೊತೆಗಿನ ರೈಲು ಸಂಪರ್ಕಕ್ಕೆ ಚಾಲನೆ ಹಾಗೂ ರಾಂಪಾಲ್‌ ವಿದ್ಯುತ್‌ ಸ್ಥಾವರದ ಎರಡನೇ ಘಟಕದ ಉದ್ಘಾಟನೆಯನ್ನು ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೆರವೇರಿಸುವರು. ಅಲ್ಲದೆ ಭಾರತದ ಜೊತೆಗಿನ ಹಲವು ಒಪ್ಪಂದಗಳಿಗೂ ಸಹಿ ಹಾಕಲಿದ್ದಾರೆ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT