ಕೋಲ್ಕತ್ತ: ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ‘ರಾಜಭವನ’ವನ್ನು ‘ಲೋಕ ಭನವ’ ಎಂದು ಮರುನಾಮಕರಣ ಮಾಡಿ ಶನಿವಾರ ಅಧಿಸೂಚನೆ ಹೊರಡಿಸಿದ್ದಾರೆ.

‘ಕೇಂದ್ರ ಗೃಹ ಸಚಿವಾಲಯವು ನವೆಂಬರ್ 25ರಂದು ನೀಡಿರುವ ನಿರ್ದೇಶನದಂತೆ ಕೋಲ್ಕತ್ತದಲ್ಲಿ ಇರುವ ರಾಜಭವನ, ಬೈರಕಪುರದಲ್ಲಿರುವ ರಾಜ್ಯಪಾಲರ ನಿವಾಸ ಮತ್ತು ಡಾರ್ಜಿಲಿಂಗ್ನಲ್ಲಿರುವ ರಾಜಭವನದ ಹೆಸರನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಗಿದೆ’ ಎಂದು ರಾಜ್ಯಪಾಲರ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಯಾಗೊಳಿಸಲಾಗಿದೆ. ‘ರಾಜ್ಯಪಾಲರ ಲೆಟರ್ಹೆಡ್ಗಳು, ಪ್ರವೇಶದ್ವಾರ, ನಾಮಫಲಗಳಲ್ಲಿ ಮತ್ತು ವೆಬ್ಸೈಟ್ನಲ್ಲಿಯೂ ಹೆಸರು ಬದಲಾವಣೆ ಮಾಡಲಾಗುವುದು’ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ.

‘ಪ್ರಧಾನಿ ಮೋದಿ ಅವರ ಪರಿವರ್ತಕ ಮತ್ತು ಸ್ಫೂರ್ತಿದಾಯಕ ನಾಯಕತ್ವದಲ್ಲಿ ‘ವಿಕಸಿತ ಭಾರತ’ ಕಟ್ಟುವ ಕಾರ್ಯದಲ್ಲಿ ಸಮಾಜದ ಎಲ್ಲ ವರ್ಗ ಜನರ ಭಾಗವಹಿಸುವಿಕೆಯು ಅಗತ್ಯವಾಗಿದೆ. ದೇಶದಾದ್ಯಂತ ಇರುವ ‘ರಾಜಭವನ’ ಮತ್ತು ‘ರಾಜ ನಿವಾಸ’ವನ್ನು ‘ಲೋಕ ಭವನ’ ಮತ್ತು ‘ಲೋಕ ನಿವಾಸ’ ಎಂದು ಕ್ರಮವಾಗಿ ಬದಲಿಸಬೇಕು ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ’ ಎಂದು ರಾಜ್ಯಪಾಲ ಬೋಸ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.