ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? : ಯೋಗಿ ಆದಿತ್ಯನಾಥ

Last Updated 10 ಸೆಪ್ಟೆಂಬರ್ 2018, 7:52 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಬಂದ್‍ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಕರ್ನಾಟಕ ಮತ್ತು ಒಡಿಶಾ ಸರ್ಕಾರ ಬಂದ್ ದಿನ ರಜೆ ಘೋಷಿಸಿದ್ದು, ತೃಣಮೂಲ ಕಾಂಗ್ರೆಸ್ ಆಡಳಿತರೂಢ ಪಶ್ಚಿಮ ಬಂಗಾಳದಲ್ಲಿ ಬಂದ್ ಮಾಡುವ ಬದಲು ರ‍್ಯಾಲಿ ಕೈಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಮಿಶ್ರ ಪ್ರತಿಕ್ರಿಯೆ
ವಾಹನ ಸಂಚಾರ ಎಂದಿನಂತೆ ಕಂಡುಬಂದಿದ್ದು, ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಲ್ಕತ್ತಾದಲ್ಲಿ ಹೆಚ್ಚಿನ ಅಂಗಡಿಗಳು ತೆರೆದಿದ್ದು, ಮೆಟ್ರೋ ಸಂಚಾರ ಸ್ಥಗಿತಗೊಂಡಿಲ್ಲ.

ಥಾನೆಯಲ್ಲಿ ರಸ್ತೆ ತಡೆ
ಎಂಎನ್ಎಸ್, ಕಾಂಗ್ರೆಸ್ ಮತ್ತು ಎನ್‌ಸಿಪಿ ಕಾರ್ಯಕರ್ತರು ತೀನ್ ಹತ್ ನಕಾ ಮತ್ತು ಪೂರ್ವ ಎಕ್ಸ್ಪ್ರೆಸಕ್ ಹೈವೇಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಉಡುಪಿಯಲ್ಲಿ ಕಾಂಗ್ರೆಸ್ -ಬಿಜೆಪಿ ಜಗಳ
ಉಡುಪಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಪೊಲೀಸ್ ಲಾಠಿ ಚಾರ್ಜ್ ನಡೆಸಿದ್ದಾರೆ.

ಹಣದುಬ್ಬರದಿಂದ ಅಭಿವೃದ್ಧಿ ಆಗುತ್ತದೆ ಎಂದು ಸರ್ಕಾರ ಹೇಳಲೂ ಬಹುದು
ಇಂಧನ ಬೆಲೆ ಏರಿಕೆ ಪ್ರತಿಭಟಸಿ ವಿಪಕ್ಷಗಳು ಬಂದ್ ನಡೆಸಿದರೂ ಬಿಜೆಪಿ ಸರ್ಕಾರ ಹೆಮ್ಮೆಯಿಂದಿದೆ, ಹೀಗಿರುವಾಗ ಹಣದುಬ್ಬರದಿಂದಲೂ ಅಭಿವೃದ್ಧಿ ಸಾಧ್ಯ ಎಂದು ಆ ಸರ್ಕಾರ ಹೇಳಲೂ ಬಹುದು: ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್

ಪ್ರತಿಭಟನೆಯಲ್ಲಿ ಭಾಗಿಯಾದ ಎಎಪಿ
ದೆಹಲಿಯ ಆಡಳಿತಾರೂಢ ಪಕ್ಷವಾದ ಆಮ್ ಆದ್ಮಿ ಪಕ್ಷ ನಿನ್ನೆಯವರೆಗೆ ಬಂದ್‍ನಿಂದ ದೂರವುಳಿದಿದ್ದು, ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿದೆ.

ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
ಹತಾಶೆಗೊಂಡಿರುವ ವಿಪಕ್ಷಕ್ಕೆ ಮುಂದಾಳತ್ವ ವಹಿಸುವ ಸಾಮರ್ಥ್ಯವಂತೂ ಇಲ್ಲ, ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಧನಾತ್ಮಕ ಮತ್ತು ಋಣಾತ್ಮಕವಾದುದು ಏನು ಎಂಬುದರ ನಡುವಿನ ಅರ್ಥ ತಿಳಿದುಕೊಳ್ಳಲು ದೇವರು ಅವರಿಗೆ ಬುದ್ಧಿ ನೀಡಲಿ ಎಂದು ನಾನು ಬಯಸುತ್ತೇನೆ. ಇಲ್ಲವಾದಲ್ಲಿ ಅವರು ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ

ಇಂಧನ ಬೆಲೆ ಏರಿಕೆ ಬಗ್ಗೆ ಮೋದಿ ಏನೂ ಮಾತನಾಡಿಲ್ಲ
ನರೇಂದ್ರ ಮೋದಿ ಮೌನವಾಗಿದ್ದಾರೆ, ಇಂಧನ ಬೆಲೆ ಏರಿಕೆ ಬಗ್ಗೆ, ರೈತರ ಬಗ್ಗೆ, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅವರೂ ಏನೂ ಮಾತನಾಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಜಾರ್ಖಂಡ್ : 58 ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಒತ್ತಾಯಪೂರ್ವಕ ಬಂದ್ ಮಾಡಿಸುತ್ತಿದ್ದ 58 ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಭಾರತ್ ಬಂದ್ ಎಂಬುವುದು ಗೊಂದಲ, ವದಂತಿ ಹಬ್ಬಿಸುವ ಹುನ್ನಾರ
ಭಾರತ್ ಬಂದ್ ಮೂಲಕ ವಿಪಕ್ಷಗಳು ಗೊಂದಲ ಸೃಷ್ಟಿಸಿ, ವದಂತಿ ಹಬ್ಬಿಸುವ ಹುನ್ನಾರ ಮಾಡುತ್ತಿವೆ ಎಂದು ಬಿಜೆಪಿ ಹೇಳಿದೆ.

ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ರ‍್ಯಾಲಿ
ಸಮಾಜವಾದಿ ಪಕ್ಷದ ಕಾರ್ಯಕರ್ತರು ವಾರಣಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.


ಉಜ್ಜೈನಿಯಲ್ಲಿ ಪೆಟ್ರೋಲ್ ಪಂಪ್ ಮೇಲೆ ದಾಳಿ
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದಾರೆ

ಅಂಧೇರಿಯಲ್ಲಿ ರೈಲು ತಡೆಗೆ ಯತ್ನ
ಮುಂಬೈಯಅಂಧೇರಿ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಎಂಎನ್‍ಎಸ್ ಕಾರ್ಯಕರ್ತರು ಪೆಟ್ರೋಲ್ ಬಂಕ್ ಮುಚ್ಚುವಂತೆ ಬಲವಂತ ಮಾಡಿದ್ದಾರೆ ಎಂದು ಪೆಟ್ರೋಲ್ ಪಂಪ್ ಮಾಲೀಕರು ಆರೋಪಿಸಿದ್ದಾರೆ.ಮುಂಬೈಯ ಚೆಂಬೂರ್, ಸಹರ್ ನಲ್ಲಿ ಕೆಲವು ಪೆಟ್ರೋಲ್ ಪಂಪ್‍ಗಳು ಮುಚ್ಚಿವೆ.

ರಾಯ್‍ಪುರ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಶರದ್ ಪವಾರ್, ಶರದ್ ಯಾದವ್ ಭಾಗಿ
ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ಮತ್ತು ಲೋಕತಾಂತ್ರಿಕ್ ಜನತಾದಳದ ಶರದ್ ಯಾದವ್ ಅವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ.

ಕತ್ತೆಯನ್ನು ತಂದು ಪ್ರತಿಭಟಿಸಿದ ಎಂಎನ್‍ಎಸ್
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರು ಚೆಂಬೂರ್ ಪೆಟ್ರೋಲ್ ಪಂಪ್‍ಗೆ ಕತ್ತೆಯನ್ನು ಕರೆ ತಂದಿದ್ದಾರೆ. ಆಕತ್ತೆಗೆ ಮೋದಿ ಚಿತ್ರವಿರುವ ಹಾರ ಹಾಕಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಜೈಪುರ, ಜೋಧಪುರ್‌ನಲ್ಲಿ ಬಿಗಿ ಬಂದೋಬಸ್ತ್
ಜೈಪುರ ಮತ್ತು ಜೋಧಪುರ್‌ನಲ್ಲಿ ಕಣ್ಗಾವಲಿಡುವಂತೆ ರಾಜಸ್ತಾನ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಹೇಳಿದೆ,
ಮುಂಜಾಗ್ರತಾ ಕ್ರಮವಾಗಿ ರಾಜಸ್ತಾನ್ ಸಶಸ್ತ್ರ ಪಡೆಯ (ಆರ್‌ಎಸಿ)ಯ ನಾಲ್ಕು ತುಕಡಿಗಳನ್ನು ಜೈಪುರ ಮತ್ತು ತಲಾ ಒಂದು ತುಕಡಿಯನ್ನು ಬರನ್, ಭರತ್‍ಪುರ್ ಮತ್ತು ಅಜ್ಮೇರ್‌ನಲ್ಲಿ ನಿಯೋಜಿಸಲಾಗಿದೆ

ಭಾರತ್ ಬಂದ್‍ ಪ್ರಯುಕ್ತ ಪ್ರತಿಭಟನೆ ನಿರತರಾಗಿರುವ ಅರುಣಾಚಲ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು

ದೇಶದ ಹಿತಾಸಕ್ತಿಗೆ ವಿರುದ್ಧವಾದ ಹಲವಾರು ಕಾರ್ಯಗಳನ್ನು ಮೋದಿ ಸರ್ಕಾರ ಮಾಡಿದೆ. ಸರ್ಕಾರವನ್ನು ಬದಲಿಸುವ ಸಮಯ ಬಂದಿದೆ: ಮನಮೋಹನ್ ಸಿಂಗ್

ಅಸ್ಸಾಂ ಜನಜೀವನದ ಮೇಲೆ ಪರಿಣಾಮ ಬೀರಿದ ಬಂದ್
ಅಸ್ಸಾಂ ಜನರ ಜೀವನದ ಮೇಲೆ ಭಾರತ್ ಬಂದ್ ಪರಿಣಾಮ ಬೀರಿದೆ, ಇಲ್ಲಿನ ಹೆದ್ದಾರಿಗೆ ತಡೆಯೊಡ್ಡಿದ್ದ 10 ಮಂದಿ ಯುವಕರನ್ನು ಬಂದಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ, ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಡಿಜಿಪಿ ಕುಲಂಧರ್ ಸೈಖಿಯಾ ಹೇಳಿದ್ದಾರೆ, ಬಸ್. ಟ್ಯಾಕ್ಸಿ ಯಾವುದೇ ವಾಹನಗಳು ಇಲ್ಲಿ ರಸ್ತೆಗಳಿದಿಲ್ಲ.

ಪಟನಾದಲ್ಲಿ ರೈಲು ತಡೆ
ಜನ್ ಅಧಿಕಾರ್ ಪಾರ್ಟಿ ಲೋಕತಾಂತ್ರಿಕ್ ಪಕ್ಷದ ಕಾರ್ಯಕರ್ತರು ಪಟನಾದ ರಾಜೇಂದ್ರ ನಗರ್ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ತಡೆಯೊಡ್ಡಿ ಪ್ರತಿಭಟಿಸಿದ್ದಾರೆ.


ಕೇರಳ: ಪ್ರವಾಹ ಪೀಡಿತ ಪ್ರದೇಶದಲ್ಲಿ ಬಂದ್ ಇಲ್ಲ
ಬಂದ್ ಬೆಂಬಲಿಗರು ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ರೈಲು ಮತ್ತು ವಿಮಾನ ಯಾನ ಎಂದಿನಂತೆ ಕಾರ್ಯವೆಸಗುತ್ತದೆ, ರಾಜ್ಯದಲ್ಲಿರುವ ಮೂರು ಐಟಿ ಪಾರ್ಕ್‍ಗಳು ಕಾರ್ಯವೆಸಗುತ್ತಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಂದ್ ಇಲ್ಲ.


ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಗುಜರಾತ್‍ನ ಭುರಾಚ್‍ನಲ್ಲಿ ಪ್ರತಿಭಟನೆಕಾರರು ಟೈರ್‌ಗೆ ಬೆಂಕಿ ಹಂಚಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದಾರೆ

ವಿಜಯವಾಡಾದಲ್ಲಿ ಎಡಪಕ್ಷಗಳ ಪ್ರತಿಭಟನೆ

ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರತಿಭಟನೆ


ಕರ್ನಾಟಕದಲ್ಲಿ ಬಸ್ ಸಂಚಾರ ಇಲ್ಲ


ವಿಶಾಖಪಟ್ಟಣಂನಲ್ಲಿ ಸಿಪಿಐ(ಎಂ) ಪ್ರತಿಭಟನೆ

ಒಡಿಶಾದಲ್ಲಿ ಪ್ರತಿಭಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT