ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಎನ್ಡಿಎ ಸರ್ಕಾರ ಭಾರಿ ಮುನ್ನಡೆ ಸಾಧಿಸಿದೆ. ಮತ್ತೆ ಬಿಹಾರದ ಜನರು ಡಬಲ್ ಎಂಜಿನ್ ಸರ್ಕಾರದತ್ತ ಒಲವು ತೋರಿದ್ದಾರೆ. ರಾಜ್ಯದಲ್ಲಿ ಕಮಲ ಅರಳಲಿದ್ದು, ಬಿಜೆಪಿ– ಜೆಡಿಯು ಜೋಡೆತ್ತಿನಂತೆ ಕೆಲಸ ಮಾಡಿವೆ.

ಹಾಗಾದರೆ ಬಿಹಾರದಲ್ಲಿ ಎನ್ಡಿಎ ಗೆಲುವಿಗೆ ಮೋಡಿ ಮಾಡಿದ ಪ್ರಮುಖಾಂಶಗಳು ಇಲ್ಲಿವೆ:

ಡಬಲ್ ಎಂಜಿನ್ ಸರ್ಕಾರ:

ಕೇಂದ್ರ ಮತ್ತು ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವುದು ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಇರುವುದು ಅಗತ್ಯ ಎಂದು ಜನರು ಭಾವಿಸಿದ್ದಾರೆ ಎನ್ನುವುದು ಫಲಿತಾಂಶದಿಂದ ತಿಳಿಯುತ್ತಿದೆ. ಮೋದಿ ಹಾಗೂ ನಿತೀಶ್ ಕುಮಾರ್ ಸರ್ಕಾರಕ್ಕೆ ಜನರು ಬಹುಮತ ನೀಡಿದ್ದಾರೆ.

'ಜಂಗಲ್ ರಾಜ್' ಭಯ

ಮಹಾಘಟಬಂಧನದ ಆಳ್ವಿಕೆಯನ್ನು 'ಜಂಗಲ್ ರಾಜ್' ಎಂದು ಕರೆಯುವ ಮೂಲಕ ಎನ್ಡಿಎ ತಂತ್ರವು ಫಲಿಸಿದೆ. ಈ ತಂತ್ರ ಮತದಾರರ ಹೃದಯದಲ್ಲಿ ಭಯ ಹುಟ್ಟಿಸಿತ್ತು. ನಿರುದ್ಯೋಗದಿಂದ ತತ್ತರಿಸಿರುವ ರಾಜ್ಯದಲ್ಲಿ ಮತ್ತೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಲಿದೆ ಎಂಬ ಭಯವನ್ನು ಎನ್ಡಿಎ ಸುಲಭವಾಗಿ ಚಿತ್ರಿಸಿತ್ತು.

ಕಳಪೆ ಪ್ರದರ್ಶನ ತೋರಿದ ವಿರೋಧ ಪಕ್ಷದ

ಮಹಾಘಟಬಂಧನ ಕಳಪೆ ಪ್ರದರ್ಶನ ನೀಡಿದ್ದು. 33 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಆರ್ಜೆಡಿ 26ರಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಕೇವಲ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ನಾಯಕತ್ವವನ್ನು ಬಿಜೆಪಿ ಟೀಕಿಸಿದೆ.

ನಿತೀಶ್ ಕುಮಾರ್ ಅವರ ಯೋಜನೆಗಳು

ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿತೀಶ್ ಘೋಷಿಸಿದ ಯೋಜನೆಗಳು ಮತದಾರರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ. ಬಾಲಕಿಯರಿಗೆ ಉಚಿತ ಸೈಕಲ್ ಮತ್ತು ಸಮವಸ್ತ್ರಗಳನ್ನು ಒದಗಿಸುವುದು, ಶಾಲಾ ಹಾಜರಾತಿಗೆ ಪ್ರೋತ್ಸಾಹ ಧನ, ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಜೀವನೋಪಾಯ ಒದಗಿಸುವುದು ಸೇರಿದಂತೆ ಜೆಡಿಯು ವಿಶೇಷವಾಗಿ ಮಹಿಳೆಯರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ಘೋಷಿಸಿತ್ತು.

ಆರ್ಜೆಡಿಯ ಭರವಸೆಗಳು

ಮದ್ಯ ನಿಷೇಧ, ಪ್ರತಿ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಮತ್ತು ಮಹಿಳೆಯರಿಗೆ ಮಾಸಿಕ ₹2,500 ಭತ್ಯೆ ನೀಡುವುದಾಗಿ ಆರ್ಜೆಡಿ ಭರವಸೆ ನೀಡಿದ್ದರೂ, ನಿತೀಶ್ ಕುಮಾರ್ ಅವರ ಕಲ್ಯಾಣ ಯೋಜನೆಗಳ ಮುಂದೆ ಆರ್ಜೆಡಿ ಭರವಸೆಗಳು ಹುಸಿಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.