ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಗಳ ರಾಶಿ ಹರಿದಾಡಿದೆ.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಮೀಮ್ಗಳು ತುಂಬಿಕೊಂಡಿವೆ.

ಬಿಜೆಪಿಯ ಅಸ್ಸಾಂ ಘಟಕ, ‘ಧನ್ಯವಾದಗಳು ಬಿಹಾರ, 2026ರಲ್ಲಿ ಮತ್ತೊಮ್ಮೆ ಸಂಭ್ರಮಿಸೋಣ’ ಎಂದು ಬರೆದುಕೊಂಡಿದೆ. ಮತ್ತೊಂದು ಪೋಸ್ಟ್ನಲ್ಲಿ ‘ಮಕ್ಕಳ ದಿನದಂದು ‘ರಾಷ್ಟ್ರೀಯ ಮಗು’ವನ್ನು ಅಸಮಾಧಾನಗೊಳಿಸಿದ್ದಕ್ಕಾಗಿ ಕ್ಷಮೆಯಿರಲಿ’ ಎನ್ನುವ ಮೀಮ್ ಹಂಚಿಕೊಂಡಿದೆ.

ಪಶ್ಚಿಮ ಬಂಗಾಳ ಬಿಜೆಪಿ, ‘ಮುಂದೆ ಪಶ್ಚಿಮ ಬಂಗಾಳದಲ್ಲಿ’ ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ, ‘ಬಿಜೆಪಿ ಇನ್ನೂ ಬಂಗಾಳದಲ್ಲಿ ಜಯ ಸಾಧಿಸಲು ಕಾಯುತ್ತಿದೆ’ ಎಂದು ಬರೆದುಕೊಂಡು ಕುರ್ಚಿಯ ಚಿತ್ರವನ್ನು ಹಂಚಿಕೊಂಡಿದೆ.

ಇನ್ನೊಂದು ಪೋಸ್ಟ್ನಲ್ಲಿ ಬಿಜೆಪಿ, ‘ವಾತಾವರಣದಲ್ಲಿ ಕೆಲವೊಮ್ಮೆ ಬೆಳಕು, ಕೆಲವೊಮ್ಮೆ ನೆರಳು ಇರುತ್ತದೆ, ಆದರೆ ರಾಹುಲ್ ಗಾಂಧಿಯವರಿಗೂ ದೇಶವು ಅದೇ ವಾತಾವರಣವನ್ನು ಕಾಯ್ದುಕೊಂಡಿದೆ’ ಎಂದು ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.