ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮೂರೇ ದಿನಗಳು ಬಾಕಿ. ಆಳುವ ಎನ್ಡಿಎ ಮತ್ತು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ನಡುವಣ ಸ್ಪರ್ಧೆ ತೀವ್ರ ತುರುಸು ಪಡೆದಿದೆ. ಎನ್ಡಿಎ ಮೈತ್ರಿಕೂಟ ಪುನಃ ಅಧಿಕಾರ ಹಿಡಿಯುತ್ತದೆಂದು ನಿಶ್ಚಿತವಾಗಿ ಹೇಳುವ ಸ್ಥಿತಿ ಇಲ್ಲ.

ವಿರೋಧ ಪಕ್ಷಗಳ ನಡುವಿನ ಒಡಕು ಎನ್ಡಿಎಗೆ ಉಳಿವಿನ ಆಸರೆಯಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾಂಪ್ರದಾಯಿಕ ಬೆಂಬಲ ನೆಲೆ ಈಗಲೂ ಭದ್ರವಾಗಿದೆ. ನಿತೀಶ್ ಅವರು ಈ ರಾಜ್ಯದಲ್ಲಿ 20 ವರ್ಷಗಳಿಂದ ಆಧಿಕಾರ ನಡೆಸಿದ್ದಾರೆ. ಆಡಳಿತ ವಿರೋಧಿ ಭಾವನೆ ಸ್ವಾಭಾವಿಕ. ಅದನ್ನು ಅಡಗಿಸುವಷ್ಟು ಪ್ರಖರ ಸಾಧನೆ ಮಾಡಿಲ್ಲ. ಸಮೀಕ್ಷೆಗಳ ಪ್ರಕಾರ, ಮುಖ್ಯಮಂತ್ರಿಯಾಗಲು ತೇಜಸ್ವಿ ಯಾದವ್ ಅರ್ಹ ಎಂದು ಶೇ 33ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ನಿತೀಶ್ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಬಲ ವರ್ಗದ ಮತಗಳ ಮೇಲೆ ಕಣ್ಣಿಟ್ಟು ಪೂರ್ವ ತಯಾರಿ ನಡೆಸಿದ್ದ ಪ್ರಶಾಂತ್ ಕಿಶೋರ್ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಕಾಗಿದ್ದಾರೆ.

ಮೈತ್ರಿಕೂಟದ ಶಾಸಕರ ಜನಪ್ರಿಯತೆ ಕುಸಿದಿದೆ. ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಈ ವ್ಯತಿರಿಕ್ತ ಅಂಶವನ್ನು ಮೆಟ್ಟಿನಿಲ್ಲುವ ಪ್ರಯತ್ನ ನಡೆಸಿದೆ. ಒಟ್ಟಾರೆಯಾಗಿ, ಎನ್ಡಿಎ ಮೈತ್ರಿಕೂಟವು 114 ಹೊಸಬರಿಗೆ ಟಿಕೆಟ್ ನೀಡಿದೆ. ಕಳೆದ ಬಾರಿ ಸ್ಪರ್ಧಿಸಿದ್ದ 129 ಮಂದಿಗೆ (ಕಳೆದ ಬಾರಿ ಸೋತಿದ್ದ 39 ಮಂದಿ ಸೇರಿ) ಮತ್ತೆ ಮಣೆ ಹಾಕಿದೆ.

2020ರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಭಾರಿ ಜನಸಮೂಹವನ್ನು ಆಕರ್ಷಿಸಿದ್ದರು. ಎನ್ಡಿಎ 243 ಸ್ಥಾನಗಳಲ್ಲಿ 125 ಸ್ಥಾನಗಳನ್ನು ಗಳಿಸಿ ಶೇ 37.26ರಷ್ಟು ಮತಗಳನ್ನು ಗಳಿಸಿತು. ಆದರೆ, ಮಹಾಮೈತ್ರಿಕೂಟ 110 ಸ್ಥಾನಗಳನ್ನು ಗಳಿಸಿತ್ತು. ಆದಾಗ್ಯೂ, ಎರಡೂ ರಂಗಗಳ ನಡುವಿನ ಮತಗಳ ವ್ಯತ್ಯಾಸವು ಕೇವಲ ಶೇ 0.03ರಷ್ಟಿತ್ತು. 160 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 20 ಸಾವಿರ ಮತಗಳಿಗಿಂತ ಕಡಿಮೆ ಇತ್ತು. ಈ ಸಲವೂ ಎನ್ಡಿಎ– ಮಹಾಮೈತ್ರಿಕೂಟದ ನಡುವೆ ತುರುಸಿನ ಪೈಪೋಟಿ ಏರ್ಪಡಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಹೀಗಾಗಿ, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಮೈತ್ರಿಕೂಟಗಳ ನಾಯಕರು ಬೆವರು ಹರಿಸುತ್ತಿದ್ದಾರೆ.

ತೇಜಸ್ವಿ ಯಾದವ್ ಅವರ ‘ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ’ ಹಾಗೂ ನಿತೀಶ್ ಅವರ ‘ಮಹಿಳೆಯರಿಗೆ ₹10 ಸಾವಿರ ನಗದು ವರ್ಗಾವಣೆ’– ಈ ಎರಡು ಭರವಸೆಗಳು ಚುನಾವಣಾ ಕಣದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ತೇಜಸ್ವಿ ಅವರು ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ, ನಿತೀಶ್ ತಮ್ಮ ನಿಷ್ಠಾವಂತ ಮಹಿಳಾ ಮತದಾರರ ನೆಲೆಯನ್ನು ಅವಲಂಬಿಸಿದ್ದಾರೆ. ಈ ಬಾರಿ 14 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.

ಜೆಡಿಯು, ಬಿಜೆಪಿ, ಆರ್ಜೆಡಿ ಹಾಗೂ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳು ಉದ್ಯೋಗ ಸೃಷ್ಟಿ, ವಲಸೆ ತಡೆ ಹಾಗೂ ಸುಭದ್ರ ಆರ್ಥಿಕತೆ ಬಗ್ಗೆ ಭರಪೂರ ಭರವಸೆಗಳನ್ನು ನೀಡುತ್ತಿವೆ. ಕಳೆದ 20 ವರ್ಷಗಳಲ್ಲಿ ಹೆಚ್ಚಿನ ಕಾಲ ಅಧಿಕಾರದಲ್ಲಿದ್ದ ಎನ್ಡಿಎ ಮೈತ್ರಿಕೂಟವು ಈಗ ಬಿಹಾರದ ಕೈಗಾರಿಕಾ ಅಭಿವೃದ್ಧಿಯ ಮಂತ್ರ ಜಪಿಸುತ್ತಿದೆ.

ಎನ್ಡಿಎಯಲ್ಲಿ ಮೋದಿ, ಅಮಿತ್ ಶಾ, ನಿತೀಶ್ ಮತ್ತು ಚಿರಾಗ್ ಪಾಸ್ವಾನ್ ಸೇರಿದಂತೆ ದೊಡ್ಡ ಪ್ರಚಾರಕರ ದಂಡೇ ಇದೆ. ಮತ್ತೊಂದೆಡೆ, ಮಹಾಮೈತ್ರಿಕೂಟದಲ್ಲಿ ಹೆಚ್ಚಿನ ಭಾರವನ್ನು ತೇಜಸ್ವಿ ಅವರೇ ಹೊತ್ತಿದ್ದಾರೆ. ಉದ್ಯೋಗ ಸೃಷ್ಟಿಯ ಘೋಷಣೆಯ ಮೂಲಕ ಯುವಕರನ್ನು ಆಕರ್ಷಿಸುತ್ತಾರೆ. ಮುಸ್ಲಿಂ-ಯಾದವ ನೆಲೆಯನ್ನು ಮೀರಿ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸಲು ಶ್ರಮಿಸುತ್ತಿದ್ದಾರೆ.

ಮಂಡಲ್ ಚಳವಳಿಯ ಬಳಿಕ ಜನಿಸಿದವರು ತೇಜಸ್ವಿ. ಆದರೆ, ನಿತೀಶ್ ಅವರು ದೇಶದ ರಾಜಕೀಯ ಚಿತ್ರಣ ಬದಲಾಯಿಸಿದ ಮಂಡಲ್ ಚಳವಳಿಯ ‘ಉತ್ಪನ್ನ’. ನಿತೀಶ್, ಮಹಿಳೆಯರಲ್ಲಿ ಅಥವಾ ಅತ್ಯಂತ ಹಿಂದುಳಿದ ವರ್ಗಗಳಲ್ಲಿ (ಇಬಿಸಿಗಳು) ತಮ್ಮದೇ ಆದ ಭದ್ರ ಮತ ನೆಲೆ ಹೊಂದಿದ್ದಾರೆ ಹಾಗೂ ಅವರನ್ನು ಸಂತೃಪ್ತಿಪಡಿಸಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮೊದಲು ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ₹10,000 ವರ್ಗಾವಣೆ ಮಾಡಿರುವುದು ‘ಗೇಮ್ ಚೇಂಜರ್’ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಈ ಮತ ಬ್ಯಾಂಕ್ಅನ್ನು ಛಿದ್ರಗೊಳಿಸಲು ತೇಜಸ್ವಿ ಅವರು ಮಹಿಳೆಯರಿಗೆ ವಾರ್ಷಿಕ ₹30,000 ಸಹಾಯಧನ ಮತ್ತು ₹500 ಕ್ಕಿಂತ ಕಡಿಮೆ ಬೆಲೆಗೆ ಅಡುಗೆ ಅನಿಲ ಸಿಲಿಂಡರ್ಗಳನ್ನು ಒದಗಿಸುವ ವಾಗ್ದಾನ ಮಾಡಿದ್ದಾರೆ.

ನವೆಂಬರ್ 15ರಂದು ಗೆಲುವಿನ ಮಾಲೆ ತಮ್ಮ ಕೊರಳಿಗೇ ಬೀಳಲಿದೆ ಎಂದು ನರೇಂದ್ರ ಮೋದಿ– ನಿತೀಶ್ ಕುಮಾರ್ ಜೋಡಿ ಎದೆ ಸೆಟೆಸಿ ಹೇಳುವ ಸ್ಥಿತಿ ಈ ಬಾರಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.