ನವದೆಹಲಿ: ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಭಾರೀ ಮುನ್ನಡೆ ಸಾಧಿಸಿದ್ದು, ದೊಡ್ಡ ಮಟ್ಟದ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ವಿಶೇಷವೆಂದರೆ ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯ ಮತದಾನದ ದಿನದಂದು ಯಾವುದೇ ಸಾವು ಸಂಭವಿಸಿಲ್ಲ ಮತ್ತು ಯಾವುದೇ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆದೇಶಿಸಿಲ್ಲ.

ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಹಾರ ರಾಜ್ಯವು ವ್ಯಾಪಕ ಹಿಂಸಾಚಾರ, ಸಾವು ಮತ್ತು ಮರುಚುನಾವಣೆಗಳಿಗೆ ಸಾಕ್ಷಿಯಾಗಿರುವುದನ್ನು ಅಧಿಕೃತ ಅಂಕಿಅಂಶಗಳೆ ತಿಳಿಸುತ್ತವೆ.

ದಾಖಲೆಯ ಪ್ರಕಾರ 1985ರ ಚುನಾವಣೆಯಲ್ಲಿ 63 ಸಾವುಗಳು ವರದಿಯಾದರೆ, 156 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿತ್ತು.

1990ರ ಚುನಾವಣೆ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ 87 ಜನರು ಮೃತಪಟ್ಟಿದ್ದರು.

1995ರಲ್ಲಿ ಭಾರೀ ಹಿಂಸಾಚಾರ ಮತ್ತು ಚುನಾವಣಾ ದುಷ್ಕೃತ್ಯಗಳಿಂದಾಗಿ ಆಗಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು ವಿಧಾನಸಭಾ ಚುನಾವಣೆಯನ್ನು 4 ಬಾರಿ ಮುಂದೂಡಿದ್ದರು.

2005ರಲ್ಲಿ ನಡೆದ ಹಿಂಸಾಚಾರ ಮತ್ತು ದುಷ್ಕೃತ್ಯಗಳಿಂದಾಗಿ 660 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಯಿತು.

2025ರಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಹಿಂಸಾಚಾರ, ಸಾವು ನೋವಿನ ಪ್ರಕರಣಗಳು ದಾಖಲಾಗಿಲ್ಲ ಎಂಬುದು ವಿಶೇಷ.
.Bihar Election Results 2025 LIVE: 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ.Bihar Results| ಬಿಹಾರ ಫಲಿತಾಂಶ ಬಂಗಾಳದ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಟಿಎಂಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.