ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ಮುನ್ನಾದಿನವಾದ ಸೋಮವಾರ ಗಯಾದಲ್ಲಿ ಗಸ್ತುಕಾಯುತ್ತಿದ್ದ ಭದ್ರತಾ ಸಿಬ್ಬಂದಿ–ಪಿಟಿಐ ಚಿತ್ರ
ಗಮನಸೆಳೆದ ‘ಗ್ಯಾರಂಟಿ’ ಘೋಷಣೆ
ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ ₹2,500 ನೆರವು, 200 ಯುನಿಟ್‌ವರೆಗೆ ಉಚಿತ ವಿದ್ಯುತ್, ₹500ಕ್ಕೆ ಒಂದು ಅನಿಲ ಸಿಲಿಂಡರ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ, ವೃದ್ಧರಿಗೆ ಮಾಸಿಕ ₹1,500 ಪಿಂಚಣಿ, ಅಂಗವಿಕಲರಿಗೆ ಮಾಸಿಕ ₹3 ಸಾವಿರ ಪಿಂಚಣಿ, ₹25 ಲಕ್ಷದವರೆಗೂ ಉಚಿತ ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಹಲವು ಯೋಜನೆಗಳನ್ನು ಪ್ರಕಟಿಸಿದೆ.
ಅತಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 20ರಿಂದ 30ಕ್ಕೆ ಏರಿಸುವುದು, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇಕಡ 16ರಿಂದ 20ಕ್ಕೆ ಏರಿಸುವುದು, ಎಸ್.ಟಿ ಮೀಸಲಾತಿಯನ್ನು 1ರಿಂದ 2ಕ್ಕೆ ಏರಿಕೆ ಮಾಡುವುದಾಗಿ ‘ಇಂಡಿಯಾ’ ಒಕ್ಕೂಟ ವಾಗ್ದಾನ ನೀಡಿದೆ.
ಬಿಹಾರದ ಜನರು ರಾಜ್ಯದ ಚಿತ್ರಣವನ್ನೇ ಬದಲಾಯಿಸಲು ಹೊರಟಿದ್ದಾರೆ. ಬಿಹಾರದ ವೈಭವವನ್ನು ಪುನಃ ಸ್ಥಾಪಿಸಲಾಗುತ್ತದೆ. ನಮ್ಮ ಗ್ಯಾರಂಟಿಗಳು ಇದನ್ನು ಸಾಧ್ಯವಾಗಿಸಲಿವೆ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ನವೆಂಬರ್ 6ರಂದು ಮತ ಚಲಾಯಿಸಿದ ಲಿಂಗವಾರು ಮತದಾರರ ಅಂಕಿಅಂಶಗಳನ್ನು ಚುನಾವಣಾ ಆಯೋಗವು ಇದುವರೆಗೂ ಬಹಿರಂಗಪಡಿಸಿಲ್ಲ. ಈ ಹಿಂದೆ ತಕ್ಷಣವೇ ನೀಡಲಾಗುತ್ತಿತ್ತು.
– ತೇಜಸ್ವಿ ಯಾದವ್ ಆರ್‌ಜೆಡಿ ಮುಖಂಡ
ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರವು ರಚಿಸಲಿದ್ದು 5 ವರ್ಷಗಳ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು.
– ಜೈರಾಮ್ ರಮೇಶ್, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ)