ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅಲ್ಪಾವಧಿಯಲ್ಲಿ ಬೆಳೆದ ಹಿಂದುಳಿದ ನಾಯಕ ಸಾಮ್ರಾಟ್‌ ಚೌಧರಿ

Published 28 ಜನವರಿ 2024, 14:27 IST
Last Updated 28 ಜನವರಿ 2024, 14:27 IST
ಅಕ್ಷರ ಗಾತ್ರ

ಪಟ್ನಾ(ಬಿಹಾರ): ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಸಾಮ್ರಾಟ್‌ ಚೌಧರಿ ಒಬಿಸಿ ನಾಯಕರಾಗಿದ್ದು, ಪ್ರಮುಖ ಕೋರಿ ಜಾತಿಗೆ ಸೇರಿದವರು. ವಿವಿಧ ಕಾಲಘಟ್ಟಗಳಲ್ಲಿ ಆರ್‌ಜೆಡಿ, ಜೆಡಿಯು ಜತೆ ಗುರುತಿಸಿಕೊಂಡಿದ್ದ ಅವರು 2017ರಲ್ಲಿ ಬಿಜೆಪಿ ಸೇರಿದರು. ತಮ್ಮ ಪ್ರತಿಭೆ ಮತ್ತು ವಾಕ್‌ಚಾತುರ್ಯದಿಂದ ಅಲ್ಪಾವಧಿಯಲ್ಲಿಯೇ ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿದರು.

ಸಾಮ್ರಾಟ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭಾನುವಾರ ಆಯ್ಕೆಯಾಗಿದ್ದು, ನಿತೀಶ್‌ ಸಂಪುಟದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳ ಪೈಕಿ ಒಬ್ಬರಾಗುವ ಸಾಧ್ಯತೆಗಳಿವೆ.

ಸಾಮ್ರಾಟ್‌ ಅವರ ತಂದೆ ಶಕುನಿ ಚೌಧರಿ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಬಳಿಕ ರಾಜಕಾರಣಿಯಾಗಿದ್ದರು. ಪ್ರಾರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಅವರು, ಲಾಲು ಪ್ರಸಾದ್‌ ಮತ್ತು ನಿತೀಶ್‌ ಕುಮಾರ್‌ ಅವರ ನಡುವೆ ತನ್ನ ನಿಷ್ಠೆಯನ್ನು ಬದಲಿಸಿದ್ದರು.

ಸಾಮ್ರಾಟ್‌ ಅವರು ರಾಬ್ರಿದೇವಿ ನೇತೃತ್ವದ ಆರ್‌ಜೆಡಿ ಸರ್ಕಾರದಲ್ಲಿ ಸಚಿವಾಗಿದ್ದರು. 2005ರಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.

2014ರಲ್ಲಿ ಅವರು ಜಿತನ್‌ ರಾಮ್‌ ಮಾಂಝಿ ನೇತೃತ್ವದ ಜೆಡಿಯು ಸರ್ಕಾರದಲ್ಲಿ ಭಾಗಿಯಾದರು. ಮೂರು ವರ್ಷಗಳ ಬಳಿಕ ಅವರು ಜೆಡಿಯುನಿಂದ ಅಸಮಾಧಾನಗೊಂಡು ಬಿಜೆಪಿ ಸೇರಿದರು. 2020ರ ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ಬಳಿಕ ಅವರು, ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2023ರ ಮಾರ್ಚ್‌ನಲ್ಲಿ ಚೌಧರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಇದೀಗ ಪುನಃ ನಿತೀಶ್‌ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT