ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರು ಫೈನಲ್‌ಗೆ

Published 13 ಮೇ 2024, 16:40 IST
Last Updated 13 ಮೇ 2024, 16:40 IST
ಅಕ್ಷರ ಗಾತ್ರ

ಬೆಂಗಳೂರು: ಅದಿತಿ ಸುಬ್ರಮಣ್ಯಂ ಅವರ ಅಮೋಘ ಆಟದ ಬಲದಿಂದ ಕರ್ನಾಟಕದ ಬಾಲಕಿಯರು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 74ನೇ ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದರು.

ಸೋಮವಾರ ನಡೆದ ನಾಲ್ಕರ ಘಟ್ಟದ ರೋಚಕ ಹಣಾಹಣಿಯಲ್ಲಿ ಕರ್ನಾಟಕ ತಂಡವು 63–62ರಿಂದ ಆತಿಥೇಯ ಮಧ್ಯಪ್ರದೇಶ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆಯಿತು. ಲೀಗ್‌ ಹಂತದ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಸೋತಿದ್ದ ಕರ್ನಾಟಕ ತಂಡವು ನಾಲ್ಕರ ಘಟ್ಟದ ಪಂದ್ಯದಲ್ಲಿ ಗೆದ್ದು ಮುಯ್ಯಿ ತೀರಿಸಿಕೊಂಡಿತು.

ಕರ್ನಾಟಕದ ಪರ ಅದಿತಿ 22 ಪಾಯಿಂಟ್ಸ್‌ ಗಳಿಸಿ ಮಿಂಚಿದರೆ, ಅವರಿಗೆ ಆದ್ಯಾ ಗೌಡ (15) ಮತ್ತು ಆದ್ಯಾ ನಾಗಲಿಂಗಂ (12) ಸಾಥ್‌ ನೀಡಿದರು. ಮಧ್ಯಪ್ರದೇಶದ ಪರ ಅನನ್ಯಾ ಮಹೇಶ್ವರಿ 14, ಗುನ್ವಿ ಅಗರ್ವಾಲ್ 13, ಖುಷಿಪಾಲ್ ಸಿಂಗ್ 11 ಅಂಕ ಗಳಿಸಿದರು.

ಕರ್ನಾಟಕ ತಂಡವು ಫೈನಲ್‌ನಲ್ಲಿ ಪಂಜಾಬ್‌ ತಂಡವನ್ನು ಎದುರಿಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಪಂಜಾಬ್‌ ತಂಡವು 68–66ರಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿತು.

ಪುರುಷರ ಮೊದಲ ಸೆಮಿಫೈನಲ್‌ನಲ್ಲಿ ರಾಜಸ್ಥಾನ ತಂಡವು 84–59ರಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT