ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವಕಪ್‌: ಡಚ್‌ ತಂಡಕ್ಕೆ ಸ್ಕಾಟ್ ಎಡ್ವರ್ಡ್ಸ್ ನಾಯಕ

Published 13 ಮೇ 2024, 16:19 IST
Last Updated 13 ಮೇ 2024, 16:19 IST
ಅಕ್ಷರ ಗಾತ್ರ

ಆಮ್‌ಸ್ಟರ್‌ಡ್ಯಾಮ್, ನೆದರ್ಲೆಂಡ್ಸ್‌: ಅನುಭವಿ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಅವರು ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ವಿಕೆಟ್‌ ಕೀಪರ್‌ ಮತ್ತು ಬ್ಯಾಟರ್‌ ಆಗಿರುವ 27 ವರ್ಷದ ಸ್ಕಾಟ್‌ ಅವರು, 56 ಟಿ20 ಪಂದ್ಯಗಳಲ್ಲಿ 122 ಸ್ಟ್ರೈಕ್‌ ರೇಟ್‌ನಲ್ಲಿ 671 ರನ್‌ ಕಳೆಹಾಕಿದ್ದಾರೆ. ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ಸೋಮವಾರ ವಿಶ್ವಕಪ್‌ ಟೂರ್ನಿಗೆ ತಂಡವನ್ನು ಪ್ರಕಟಿಸಿದೆ. ಭಾರತ ಮೂಲದ ತೇಜ ನಿಡಮಾನೂರು, ವಿಕ್ರಮ್ ಸಿಂಗ್ ಮತ್ತು ಆರ್ಯನ್ ದತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2022ರ ಟಿ20 ವಿಶ್ವಕಪ್ ಮತ್ತು ಕಳೆದ ವರ್ಷದ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಡಚ್‌ ತಂಡವು ಮೂರನೇ ಬಾರಿ ಐಸಿಸಿ ಮಟ್ಟದ ಟೂರ್ನಿಯಲ್ಲಿ ಭಾಗವಹಿಸಲಿದೆ. ನೆದರ್ಲೆಂಡ್ಸ್‌ ತಂಡವು ಟಿ20 ವಿಶ್ವಕಪ್‌ನಲ್ಲಿ ಜೂನ್‌ 4ರಂಧು ನೇಪಾಳ ವಿರುದ್ಧ ಅಭಿಯಾನ ಆರಂಭಿಸಲಿದೆ.

ತಂಡ ಹೀಗಿದೆ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಆರ್ಯನ್ ದತ್, ಬಾಸ್ ಡಿ ಲೀಡೆ, ಡೇನಿಯಲ್ ಡೋರಮ್, ಫ್ರೆಡ್ ಕ್ಲಾಸೆನ್, ಕೈಲ್ ಕ್ಲೈನ್, ಲೋಗನ್ ವ್ಯಾನ್ ಬೀಕ್, ಮ್ಯಾಕ್ಸ್ ಒ'ಡೌಡ್, ಮೈಕೆಲ್ ಲೆವಿಟ್, ಪಾಲ್ ವ್ಯಾನ್ ಮೀಕೆರೆನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ತೇಜ ನಿಡಮನೂರು, ಟಿಮ್ ಪ್ರಿಂಗಲ್, ವಿಕ್ರಮ್ ಸಿಂಗ್, ವಿವ್ ಕಿಂಗ್ಮಾ, ವೆಸ್ಲಿ ಬ್ಯಾರೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT