ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಸರ್ಕಾರದ ವಿರುದ್ಧ ತೇಜಸ್ವಿ ಯಾದವ್‌ ಪ್ರತಿಭಟನೆ; ಕೇಜ್ರಿವಾಲ್‌ ಬೆಂಬಲ

ಲೈಂಗಿಕ ಹಗರಣದ ಪ್ರಮುಖ ಆರೋಪಿ ಬ್ರಜೇಶ್‌ ಠಾಕೂರ್‌ಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ
Last Updated 4 ಆಗಸ್ಟ್ 2018, 14:44 IST
ಅಕ್ಷರ ಗಾತ್ರ

ನವದೆಹಲಿ:ಮುಜಫ್ಫರ್‌ಪುರದಪುನರ್ವಸತಿ ಕೇಂದ್ರದಲ್ಲಿನ ಲೈಂಗಿಕ ಹಗರಣದಪ್ರಮುಖ ಆರೋಪಿಬ್ರಜೇಶ್‌ ಠಾಕೂರ್‌ಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿ, ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್‌ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಬಿಹಾರ ಸರ್ಕಾರದ ವಿರುದ್ಧ ಆರ್‌ಜೆಡಿ ನಾಯಕರೊಂದಿಗೆ ತೇಜಸ್ವಿ ಯಾದವ್‌ ಪ್ರತಿಭಟನೆ ನಡೆಸಿದ್ದು, ಕಳೆದ ಒಂದು ವರ್ಷದಿಂದ ಬಿಹಾರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿವೆ, ರಾಜ್ಯದಾದ್ಯಂತ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವರದಿಯಾಗುವೆ ಎಂದು ಆರೋಪಿಸಿದರು.

ಪುನರ್ವಸತಿ ಕೇಂದ್ರದ ಮಾಲೀಕ, ಪ್ರಮುಖ ಆರೋಪಿ ಬ್ರಜೇಶ್‌ಗೆ ಗಲ್ಲು ಶಿಕ್ಷೆಯಾಗಬೇಕು. ಮಕ್ಕಳ ಆಯೋಗದಿಂದ ವರದಿ ಬಂದ ನಂತರವೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಟಾಟಾ ಇನ್‌ಸ್ಟಿಟ್ಯೂಟ್‌ ವರದಿ ನೀಡಿ ಎರಡು ತಿಂಗಳ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ, ಅದರಲ್ಲಿಯೂ ಬ್ರಜೇಶ್‌ ಹೆಸರು ನಾಪತ್ತೆಯಾಗಿದೆ. ಆತ ಮಾನ್ಯ ನಿತೀಶ್‌ ಕುಮಾರ್‌ ಅವರ ಆಪ್ತನಾಗಿದ್ದಾನೆ ಎಂದು ತೇಜಸ್ವಿ ಅಸಹನೆ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗಿಯಾಗಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ’ನಮ್ಮ ದೇಶದ ಮಹಿಳೆಯರ ಬೆಂಬಲಕ್ಕಾಗಿ ನಾವು ಇಲ್ಲಿ ಜತೆಯಾಗಿದ್ದಾವೆ. ಮಾನ್ಯ ನಿತೀಶ್‌ ಕುಮಾರ್ ಅವರಿಗೆ ಈ ಪ್ರಕರಣ ತಲೆತಗ್ಗಿಸುವಂಥದ್ದು ಎಂದು ಅನಿಸಿದ್ದರೆ, ಶೀಘ್ರವೇ ಕ್ರಮಕೈಗೊಳ್ಳಲಿ’ ಎಂದು ರಾಹುಲ್‌ ಗಾಂಧಿ ಒತ್ತಾಯಿಸಿದರು.

ತೇಜಸ್ವಿ ಯಾದವ್‌ ನಡೆಸುತ್ತಿರುವ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬೆಂಬಲ ವ್ಯಕ್ತಪಡಿಸಿದ್ದು, ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಲೈಂಗಿಕ ಹಗರಣದ ಸಂಬಂಧ ಜುಲೈ 28ರಂದು ಬ್ರಜೇಶ್‌ ಠಾಕೂರ್‌ ಹಾಗೂ ಇತರ 9 ಮಂದಿಯನ್ನು ಬಂಧಿಸಲಾಗಿದೆ. ಈತನ ಮಾಲಿಕತ್ವದ ಪುನರ್ವಸತಿ ಕೇಂದ್ರದಲ್ಲಿ 34 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈತನದೇ ಎನ್ನಲಾಗಿರುವ ಮತ್ತೊಂದು ಪುನರ್ವಸತಿ ಕೇಂದ್ರದಿಂದ 11 ಮಂದಿ ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT