ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಟೆಗೆ 145 ಕಿ.ಮೀ ಗಾಳಿಯ ವೇಗ, ವಿಪರೀತ ಮಳೆ: ಹೇಗಿದೆ ಬಿಪೊರ್‌ಜಾಯ್ ಅಬ್ಬರ

Published : 15 ಜೂನ್ 2023, 14:35 IST
Last Updated : 15 ಜೂನ್ 2023, 14:35 IST
ಫಾಲೋ ಮಾಡಿ
Comments

ಅಹಮದಾಬಾದ್: 10 ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸುತ್ತಿದ ಬಿಪೊರ್‌ಜಾಯ್ ಚಂಡಮಾರುತವು ಗುಜರಾತ್‌ನ ಕಛ್ ಜಿಲ್ಲೆಗೆ ಪ್ರವೇಶಿಸಿದೆ.

ಗಾಳಿಯ ವೇಗ ಗಂಟೆಗೆ 145 ಕಿ.ಮೀನಷ್ಟಿದ್ದು, ಕಛ್ ಮತ್ತು ಸೌರಾಷ್ಟ್ರ ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, ಹೈಅಲರ್ಟ್‌ನಲ್ಲಿ ಇರಿಸಲಾಗಿದೆ.

ಸೈಕ್ಲೋನ್‌ನಿಂದ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನೀಡಿದ ಮುನ್ಸೂಚನೆ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಜನರನ್ನು ಈ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ(ಎನ್‌ಡಿಆರ್‌ಎಫ್) 15 ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡದ(ಎಸ್‌ಡಿಆರ್‌ಎಫ್) 12 ತಂಡಗಳು, ಭಾರತೀಯ ಸೇನೆ, ನೌಕಾದಳ, ವಾಯುಪಡೆ, ಕರಾವಳಿ ಕಾವಲು ಪಡೆ ಮತ್ತು ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ಕಾರ್ಯಾಚರಣೆ ನಿಯೋಜಿಸಲಾಗಿತ್ತು.

ಕಛ್, ದೇವಭೂಮಿ ದ್ವಾರಕಾ, ಜಾಮ್‌ನಗರ, ಪೋರಬಂದರ್, ರಾಜಕೋಟ್, ಮೊರ್ಬಿ ಮತ್ತು ಜುನಾಘಢ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ(11.5 ಸೆ.ಮೀ ನಿಂದ 20.4 ಸೆ.ಮೀ) ವಿಪರೀತ ಮಳೆ(20.5 ಸೆ.ಮೀಗೂ ಹೆಚ್ಚು) ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.

‘ಒಂದು ವೇಳೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ 25 ಸೆ.ಮೀಗೂ ಹೆಚ್ಚು ಮಳೆಯಾಗಿದ್ದರೆ ನಮಗೆ ಅಚ್ಚರಿಯಾಗುವುದಿಲ್ಲ. ಸಾಮಾನ್ಯವಾಗಿ ಈ ಋತುವಿನಲ್ಲಿ ಇಷ್ಟು ತೀವ್ರ ಮಳೆ ಅಲ್ಲಿ ಆಗುವುದಿಲ್ಲ. ತಗ್ಗುಪ್ರದೇಶಗಳಲ್ಲಿ ಪ್ರವಾಹದ ವಾತಾವರಣ ಉಂಟಾಗುವ ಸಾಧ್ಯತೆ ಇದೆ’ಎಂದು ಐಎಂಡಿ ಡಿಜಿ ಮೃತ್ಯುಂಜಯ ಮೋಹಪಾತ್ರ ಹೇಳಿದ್ದಾರೆ.

ಕಟಾವಿಗೆ ಬಂದಿರುವ ಬೆಳೆ, ಮನೆಗಳು, ರಸ್ತೆಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಅಪಾರ ಹಾನಿ ಬಗ್ಗೆ ಇಲಾಖೆ ಎಚ್ಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT