ಚೆನ್ನೈ: ತಮಿಳುನಾಡಿನ ಹಲವೆಡೆ ಭಾರಿ ಸಂಖ್ಯೆಯಲ್ಲಿ ಕಾಗೆಗಳು ಮೃತಪಟ್ಟ ಬಗ್ಗೆ ವರದಿಯಾಗಿದ್ದು, ಹಕ್ಕಿಜ್ವರದ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಕಟ್ಟೆಚ್ಚರ ವಹಿಸಿದೆ.

ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳು, ಸೋಂಕು ಹರಡದಂತೆ ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹಾ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.

‘ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಾರ್ವಜನಿಕರಿಗೆ ಪ್ರತ್ಯೇಕ ನಿರ್ದೇಶನವನ್ನು ನೀಡಲಾಗಿದೆ’ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ನಿರ್ದೇಶಕ ಡಾ.ಎ. ಸೋಮಸುಂದರಂ ಅವರು ತಿಳಿಸಿದ್ದಾರೆ.

‘ಕೆಮ್ಮು, ಜ್ವರ ಅಥವಾ ಉಸಿರಾಟ ಸಮಸ್ಯೆ ಸೇರಿದಂತೆ ಹಕ್ಕಿ ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಲು ಸೂಚಿಸಲಾಗಿದೆ. ಕಸಾಯಿಖಾನೆ ಅಥವಾ ರೋಗಪೀಡಿತ, ಮೃತ ಹಕ್ಕಿಗಳ ಸಂಪರ್ಕಕ್ಕೆ ಬರುವವರು ಹೆಚ್ಚಿನ ಎಚ್ಚರ ವಹಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

ಮೃತ ಹಕ್ಕಿಗಳನ್ನು ಸುಟ್ಟು ಹಾಕುವಂತೆ ಅಥವಾ ಮಣ್ಣಿನಲ್ಲಿ ಹೂತು ಹಾಕುವಂತೆ ಪಶುಸಂಗೋಪನೆ ಇಲಾಖೆಯು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸತ್ತ ಹಕ್ಕಿಗಳು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಹಕ್ಕಿ ಜ್ವರ ಎಂದರೇನು?

ಇದು ಹಕ್ಕಿಗಳನ್ನು ಬಾಧಿಸುವ ಮತ್ತು ಬಹುಬೇಗ ಹರಡುವ ಜ್ವರ. ಇದಕ್ಕೆ ಎಚ್5ಎನ್1 ವೈರಸ್ ಕಾರಣ. ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುವುದು ಅಪರೂಪ. ಸೋಂಕಿತ ಹಕ್ಕಿಗಳ ಎಂಜಲು, ಲೋಳೆ, ಹಿಕ್ಕೆಯಲ್ಲಿ ವೈರಸ್ಗಳಿರುತ್ತವೆ. ಹೆಬ್ಬಾತು, ಬಾತುಕೋಳಿಯಂತಹ ಕಾಡಿನ ಕೆಲವು ಪಕ್ಷಿಗಳಿಗೆ ಸೋಂಕು ತಗುಲಿದರೂ ಅವುಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವಾಗುವುದಿಲ್ಲ. ಆದರೆ, ಕೋಳಿಗಳಿಗೆ ಈ ಸೋಂಕು ಕಂಟಕವಾಗಿದ್ದು, ತೀವ್ರ ಅನಾರೋಗ್ಯದ ಜೊತೆಗೆ ಅವುಗಳ ಪ್ರಾಣಕ್ಕೂ ಕುತ್ತು ತರುತ್ತದೆ.

1996ರಲ್ಲಿ ಚೀನಾದಲ್ಲಿ ಮೊದಲು ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. 2021ರವರೆಗೂ ಇದು ಗಂಭೀರ ಕಾಯಿಲೆಯಾಗಿರಲಿಲ್ಲ. ಆ ಬಳಿಕ ವೈರಸ್ ರೂಪಾಂತರಗೊಂಡು ಪಕ್ಷಿ, ಪ್ರಾಣಿಗಳನ್ನು ತೀವ್ರವಾಗಿ ಕಾಡಲು ಆರಂಭಿಸಿದೆ.

ರೋಗ ಲಕ್ಷಣ ಏನೇನು?

ಮನುಷ್ಯರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಚಳಿಯ ಅನುಭವ, ತಲೆ ನೋವು, ಮೈಕೈ ನೋವು, ಕೆಮ್ಮು, ಉಸಿರಾಟ ತೊಂದರೆ, ಗಂಟಲು ನೋವು, ಭೇದಿ, ಹೊಟ್ಟೆನೋವು, ಮೂಗು / ಒಸಡಿನಲ್ಲಿ ರಕ್ತ ಸ್ರಾವ, ಕೆಂಗಣ್ಣು ಬಾಧಿಸುತ್ತದೆ.

ಕೋಳಿಗಳಲ್ಲಿ ಸೋಂಕಿನ ಲಕ್ಷಣಗಳು ತಕ್ಷಣಕ್ಕೆ ಕಾಣಿಸಿಕೊಳ್ಳುವುದಿಲ್ಲ. ಅವು ಬಹುಬೇಗ ಹರಡುವುದರಿಂದ ರೋಗ ಪತ್ತೆ ಕಷ್ಟ. ಸಾಮಾನ್ಯವಾಗಿ ಸೋಂಕಿತ ಕೋಳಿಗಳು ಆಹಾರ ತಿನ್ನುವುದಿಲ್ಲ. ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚು ಓಡಾಡುವುದಿಲ್ಲ. ಕಣ್ಣುಗಳು ತೇವಗೊಂಡಿರುತ್ತವೆ. ರೆಕ್ಕೆಗಳು ಕೆದರಿರುತ್ತವೆ. ನೆತ್ತಿ ಮತ್ತು ಜೋಲು ದೊಗಲುವಿನಲ್ಲಿ (ಕುತ್ತಿಗೆಯಲ್ಲಿ ಜೋಲಾಡುವ ಭಾಗ) ದ್ರವ ಸಂಗ್ರಹವಾಗುತ್ತದೆ. ಕೆಮ್ಮೂ ಕಾಡಬಹುದು. ತಲೆ ಭಾಗ ಊದಿಕೊಳ್ಳುತ್ತದೆ. ಕಾಲಿನ ಚರ್ಮದ ಅಡಿಯಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ದಿಢೀರ್ ಸಾವು ಕೂಡ ಸಂಭವಿಸುತ್ತದೆ.

ಸದ್ಯ ಹಕ್ಕಿಜ್ವರಕ್ಕೆ ಲಸಿಕೆ ಇಲ್ಲ. ವಿವಿಧ ಕಂಪನಿಗಳು ಲಸಿಕೆಯ ತಯಾರಿಕೆಯಲ್ಲಿ ತೊಡಗಿವೆ. ಲಸಿಕೆ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುವುದಕ್ಕಾಗಿ ಅಮೆರಿಕವು ಕಂಪನಿಗಳಿಗೆ ಆರ್ಥಿಕವಾಗಿ ನೆರವು ನೀಡಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.