ನೋಯ್ಡಾ: ಕೈರಾನಾ ನಿರ್ಗಮನದ ಬಗ್ಗೆ ಮಾತನಾಡುವವರು ವಿಧಾನಸಭಾ ಚುನಾವಣೆಯ ನಂತರ ಉತ್ತರ ಪ್ರದೇಶದಿಂದ ವಲಸೆ ಹೋಗಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಕಿಡಿಕಾರಿದ್ದು, ಬಿಜೆಪಿಯು ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಶಾಮ್ಲಿಯ ಕೈರಾನಾದಲ್ಲಿ ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯಾದವ್, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

'ಬಿಜೆಪಿ ನಕಾರಾತ್ಮಕ ರಾಜಕಾರಣ ಮಾಡುತ್ತಿದೆ. ಎಸ್‌ಪಿ-ಆರ್‌ಎಲ್‌ಡಿ ಸಂಬಂಧವು ಸೋದರತ್ವವನ್ನು ಪ್ರತಿನಿಧಿಸುತ್ತದೆ. ಕೈರಾನಾ ನಿರ್ಗಮನದ ಬಗ್ಗೆ ಮಾತನಾಡುವವರು ಚುನಾವಣೆಯ ನಂತರ ಉತ್ತರ ಪ್ರದೇಶದಿಂದ ವಲಸೆ ಹೋಗಬೇಕಾಗುತ್ತದೆ' ಎಂದು ಯಾದವ್ ಹೇಳಿದರು.

ವಾರ್ಷಿಕ ಹಣಕಾಸು ಹೇಳಿಕೆಯನ್ನು 'ಅಮೃತ್ ಕಾಲ' ಎಂದಿರುವ ಕೇಂದ್ರವನ್ನು ಲೇವಡಿ ಮಾಡಿದ ಅವರು, ಹಿಂದಿನ ಬಜೆಟ್‌ಗಳು 'ವಿಷ'ವೇ ಎಂದು ಪ್ರಶ್ನಿಸಿದರು.

'ಬಜೆಟ್‌ನಲ್ಲಿ ವಜ್ರಗಳು, ಚಪ್ಪಲಿಗಳು ಮತ್ತು ಬೂಟುಗಳನ್ನು ಅಗ್ಗಗೊಳಿಸಲಾಗಿದೆ. ಅಗ್ಗದ ವಜ್ರಗಳು ಬಡವರಿಗೆ ಹೇಗೆ ಸಹಾಯ ಮಾಡುತ್ತವೆ? ಬಡವರ, ಯುವಕರ ಚಪ್ಪಲಿ, ಬೂಟು ಸವೆದು ಹೋಗಿದೆ ಆದರೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಯುಪಿಯಲ್ಲಿ ಬಿಜೆಪಿಯ ಸಮಯ ಮುಗಿಯುತ್ತಿದೆ' ಎಂದು ಯಾದವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.