ಮುಂಬೈ : ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಲಂಚ ಪಡೆದ ಆರೋಪದಡಿ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಮಂದಾರ ಅಶೋಕ ತಾರಿ ಅವರನ್ನು ಪ್ರಮುಖ ಆರೋಪಿಯೆಂದು ಗುರುತಿಸಲಾಗಿದ್ದು, ಅವರು ಘಾಟಕೋಪರ ಪೂರ್ವದಲ್ಲಿರುವ ಬಿಎಂಸಿಯ ಪೂರ್ವ ವಲಯ ಕಚೇರಿಯ ನಿಯೋಜಿತ ಅಧಿಕಾರಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾರಿ, ಕಟ್ಟಡ ಅಕ್ರಮ ಮಹಡಿಗಳನ್ನು ನೆಲಸಮಗೊಳಿಸದಿರಲು ಡೆವಲಪರ್‌ಗಳಿಂದ ₹2 ಕೋಟಿ ಲಂಚವನ್ನು ಕೇಳಿದ್ದು, ಮುಂದಿನ ದಿನಗಳಲ್ಲಿಯೂ ಡೆವಲಪರ್‌ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಎಂದು ಅಧಿಕಾರಿ ಹೇಳಿದರು.

ಆದರೆ, ಡೆವಲಪರ್ ಎಸಿಬಿಯನ್ನು ಸಂಪರ್ಕಿಸಿ ತಾರಿ ವಿರುದ್ಧ ಜುಲೈ 31ರಂದು ದೂರು ನೀಡಿದ್ದಾರೆ.

ಮೊಹಮ್ಮದ್ ಶಹಜದಾ ಯಾಸಿನ್ ಶಾ ಮತ್ತು ಪ್ರತೀಕ್ ವಿಜಯ್ ಪಿಸೆ ಎಂಬ ಇಬ್ಬರು ಮಂಗಳವಾರ ₹75 ಲಕ್ಷ ಲಂಚವನ್ನು ದೂರುದಾರರಿಂದ ವಸೂಲಿ ಮಾಡುತ್ತಿದ್ದಾಗ ಮುಂಬೈ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಾರಿ ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.