ಪಟ್ನಾ: ಗಂಗಾ ನದಿಯದಡದಲ್ಲಿ ಸೋಮವಾರ ಮೃತದೇಹಗಳ ರಾಶಿ ಪತ್ತೆಯಾಗಿರುವುದು ದುರುದುಷ್ಟಕರ ಎಂದಿರುವಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಘಟನೆ ಬಗ್ಗೆ ತನಿಖೆ ನಡೆಸುವಂತೆ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಗಂಗಾ ಮಹಾದೇವ್ ಘಾಟ್ ಬಳಿ 12ಕ್ಕೂ ಹೆಚ್ಚು ಹೆಣಗಳು ತೇಲಿ ಬಂದು ದಡ ಸೇರಿದ್ದವು. ಈ ವೇಳೆ ನಾಯಿಗಳು ಶವಗಳನ್ನು ಕಿತ್ತು ತಿನ್ನುವ ಭಯಾನಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಓದಿ:ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು: ಕೋವಿಡ್ ಸೋಂಕಿತರದ್ದೆಂಬ ಶಂಕೆ

ಗಂಗಾ ನದಿ ಹರಿಯುವ ಉತ್ತರ ಪ್ರದೇಶ,ಬಿಹಾರದಲ್ಲೂ ನದಿಯ ತೀರದಲ್ಲಿ ಶವಗಳು ಪತ್ತೆಯಾಗಿದ್ದವು. ಶವಗಳ ಮೇಲೆ ಸೀಲ್ ಮಾರ್ಕ್ ಇರುವುದು ಪತ್ತೆಯಾಗಿರುವುದರಿಂದ ಅವು ಕೋವಿಡ್ ಮೃತದೇಹಗಳು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.

ಈ ಘಟನೆ ಸಂಬಂಧ ಉಭಯ ರಾಜ್ಯಗಳು ತನಿಖೆ ನಡೆಸಬೇಕು ಎಂದು ಗಜೇಂದ್ರ ಸಿಂಗ್ ಶೇಖಾವತ್ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.