ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೇಯಸಿ ಕೊಲೆಗೈದು, ದೇಹವನ್ನು 35 ತುಂಡುಗಳಾಗಿಸಿ ಎಸೆದವನ ಬಂಧನ!

Last Updated 26 ನವೆಂಬರ್ 2022, 11:29 IST
ಅಕ್ಷರ ಗಾತ್ರ

ನವದೆಹಲಿ: ಇದೊಂದು ಭೀಕರ ಕೊಲೆಗೆ ಇಡೀ ದೆಹಲಿ ನಗರವೇ ಬೆಚ್ಚಿಬಿದ್ದಿದೆ. ನೀರಜ್‌ ಗ್ರೋವರ್‌ ಕೊಲೆಯನ್ನು ನೆನಪಿಸುವ ಹತ್ಯೆಯೊಂದು ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನ್ನೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿದ್ದ ಪ್ರೆಯಸಿಯನ್ನು ಕೊಲೆಗೈದು ಆಕೆಯ ದೇಹವನ್ನು 35 ತುಂಡಗಳಾಗಿ ನಗರದಾದ್ಯಂತ ಎಸೆದಿದ್ದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಅಫ್ತಾಬ್‌ ಅಮೀನ್‌ ಪೂನಾವಾಲಾ ಬಂಧಿತ ಆರೋಪಿ. ತನ್ನ ಗೆಳತಿ ಶ್ರದ್ಧಾಳೊಂದಿಗೆ ಜಗಳವಾಡಿದ್ದ ಈತ, ಮೇ.18ರಂದು ಆಕೆಯನ್ನು ಕೊಲೆಗೈದಿದ್ದ. ಬಳಿಕ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಮುಂದಿನ 18 ದಿನಗಳ ಕಾಲ ಮಧ್ಯರಾತ್ರಿ 2 ಗಂಟೆಗೆ ಮನೆಯಿಂದ ತೆರಳಿ ನಗರದಾದ್ಯಂತ ದೇಹದ ಭಾಗಗಳನ್ನು ಎಸೆದುಬರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

26 ವರ್ಷದ ಶ್ರದ್ಧಾ ಮುಂಬೈನ ಕಾಲ್‌ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದು ಆರೋಪಿ ಅಫ್ತಾಬ್‌ನನ್ನು ಪೂನಾವಾಲಾದಲ್ಲಿ ಭೇಟಿಯಾಗಿದ್ದಳು. ಪ್ರೀತಿಯ ಬಲೆಗೆ ಬಿದ್ದ ಇಬ್ಬರು ಒಟ್ಟಾಗಿರಲು ಪ್ರಾರಂಭಿಸಿದ್ದರು. ಕುಟುಂಬ ಇವರ ಸಂಬಂಧಕ್ಕೆ ಒಪ್ಪದೇ ಇದ್ದಾಗ ಇಬ್ಬರೂ ದೆಹಲಿಗೆ ಬಂದು ಮೆಹ್ರೌಲಿಯ ವಾಸಿಸಲು ಪ್ರಾರಂಭಿಸಿದ್ದರು.

ಮಗಳು ಕರೆ ಸ್ವೀಕರಿಸಿದಿದ್ದಾಗ ಗಾಬರಿಗೊಂಡ ಆಕೆಯ ತಂದೆ ವಿಕಾಸ್‌ ಮದಾನ್‌ ಮಗಳನ್ನು ನೋಡಲು ನ.8ರಂದು ದೆಹಲಿಗೆ ಬಂದಿದ್ದಾರೆ. ಪ್ಲಾಟ್‌ ಲಾಕ್‌ ಆಗಿರುವುದನ್ನು ಗಮನಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಬಳಿಕ ಕೊಲೆಯ ವಿಚಾರ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT