ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿದ್ಯಾರ್ಥಿ ಸಾವು; ‌‘ಶಿಕ್ಷಾರ್ಹ ನರಹತ್ಯೆ’ ಪ್ರಕರಣದ ದಾಖಲು

Published 1 ಫೆಬ್ರುವರಿ 2024, 15:30 IST
Last Updated 1 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ನವದೆಹಲಿ: ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಥಳಿತಕ್ಕೊಳಗಾದ 12 ವರ್ಷ ವಯಸ್ಸಿನ ಶಾಲಾ ಬಾಲಕ ಮೃತಪಟ್ಟ ಘಟನೆ ಉತ್ತರ ದೆಹಲಿಯಲ್ಲಿ ಜನವರಿ 20ರಂದು ನಡೆದಿತ್ತು. ವಾರದ ಬಳಿಕ ಆ ಘಟನೆಗೆ ಸಂಬಂಧಸಿ ‘ಶಿಕ್ಷಾರ್ಹ ನರಹತ್ಯೆ’ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಕ್ರಮಬದ್ಧ ತನಿಖೆ ಆರಂಭಿಸಲಾಗಿದೆ. ಮೃತ ಬಾಲಕನ ತಂದೆ ಮತ್ತು ಕುಟುಂಬದ ಇತರ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್‌ ಆಯುಕ್ತರು (ಉತ್ತರ ದೆಹಲಿ) ತಿಳಿಸಿದ್ದಾರೆ.

‘ಹಿರಿ ತರಗತಿ ವಿದ್ಯಾರ್ಥಿಗಳು ತನ್ನನ್ನು ಥಳಿಸಿದ್ದಾಗಿ ಮತ್ತು ಎಡ ಮಂಡಿಯಲ್ಲಿ ಗಾಯಾಗಿರುವುದಾಗಿ ನಮ್ಮ ಮಗ ಜನವರಿ 11ರಂದು ಹೇಳಿದ್ದ. ಆತನನ್ನು ದೀಪ್‌ ಚಂದ್‌ ಬಂಧು ಆಸ್ಪತ್ರೆಗೆ ಕರೆದೊಯ್ದಿದ್ದೆ. ಆತನಿಗೆ ಕೆಲ ಔಷಧಗಳನ್ನು ಸೂಚಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮೂಳೆ ಸಂಬಂಧಿ ಸಮಸ್ಯೆಗಳ ವಿಭಾಗಕ್ಕೆ ಹೋಗಲು ಸೂಚಿಸಿದ್ದರು. ಆದರೆ ನಾವು ಹೋಗುವ ವೇಳೆಗೆ ಆ ವಿಭಾಗ ಮುಚ್ಚಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ’ ಎಂದು ಬಾಲಕನ ತಂದೆ ಹೇಳಿದ್ದಾರೆ.

ಜನವರಿ 15ರಂದು ರೋಹಿಣಿಯಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲೂ ಕೆಲ ಔಷಧಗಳನ್ನು ನೀಡಿದರು. ಆದರೆ, ಮಗನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಪುನಃ ಆತನನ್ನು ಜ. 20ರಂದು ದೀಪ್‌ ಚಂದ್‌ ಬಂಧು ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ಬಾಲಕನ ತಂದೆ ಹೇಳಿದ್ದಾರೆ. ತಮ್ಮ ಮಗನ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ನಡೆದಿದೆ ಎಂದೂ ಬಾಲಕನ ತಂದೆ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.

ಬಾಲಕನ ಮರಣೋತ್ತರ ಪರೀಕ್ಷೆ ವರದಿಯನ್ನು ಪರಿಶೀಲಿಸಲಾಯಿತು. ಸೆಪ್ಟಿಮಿಕ್‌ ಶಾಕ್‌ನಿಂದ (ಗಾಯದ ಸೋಂಕಿನ ಕಾರಣ ರತ್ತದೊತ್ತಡದಲ್ಲಿ ಇಳಿಕೆ) ಈ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 304 (ಶಿಕ್ಷಾರ್ಹ ನರಹತ್ಯೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಕನ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಮಂಗಳವಾರ ಹಸ್ತಾಂತರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT