ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣಾ ಗಾಂಧಿ’ ರಾಹುಲ್ ಅಂಕಾಪುರ ಚಿಕನ್‌ ಸವಿಯಲಿ: ಕವಿತಾ 

Published 18 ಅಕ್ಟೋಬರ್ 2023, 14:10 IST
Last Updated 18 ಅಕ್ಟೋಬರ್ 2023, 14:10 IST
ಅಕ್ಷರ ಗಾತ್ರ

ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಚುನಾವಣಾ ಗಾಂಧಿ’ ಎಂದು ಕರೆದಿರುವ ಬಿಆರ್‌ಎಸ್‌ ನಾಯಕಿ ಕೆ.ಕವಿತಾ, ಪ್ರವಾಸಿಗರಾಗಿ ತೆಲಂಗಾಣಕ್ಕೆ ಬಂದು ಸ್ಥಳೀಯ ಭಕ್ಷ್ಯ ‘ಅಂಕಾಪುರ ಚಿಕನ್’ ಸವಿದು ಹೋಗಬಹುದು ಎಂದು ಹೇಳಿದ್ದಾರೆ. 

ಬೋಧನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಬಸ್ ಯಾತ್ರೆ ವೇಳೆ ನಿಜಾಮಾಬಾದ್‌ಗೆ ಭೇಟಿ ನೀಡಲಿರುವ ರಾಹುಲ್, ‘ವಿಲಕ್ಷಣ’ ಮಾತುಗಳಿಂದ ಜನರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸದಂತೆ ಕೋರಿರುವುದಾಗಿ ತಿಳಿಸಿದರು. 

ರಾಹುಲ್ ಗಾಂಧಿ ತೆಲಂಗಾಣಕ್ಕೆ ಏಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದ ಕವಿತಾ, ‘ರಾಜ್ಯದ ರೈತರು ಅಥವಾ ವಿದ್ಯಾರ್ಥಿಗಳಿಗೆ ಕಾಂಗ್ರೆಸ್‌ ಏನನ್ನೂ ಮಾಡಿಲ್ಲ ಮತ್ತು ತೆಲಂಗಾಣ ಅಭಿವೃದ್ಧಿಯ ಭಾಗವಾಗಿಲ್ಲ. ತೆಲಂಗಾಣದಲ್ಲಿ ನಿಮಗೆ ಸ್ಥಾನವಿಲ್ಲ. ಅದಕ್ಕಾಗಿಯೇ ನಿಮ್ಮನ್ನು ಚುನಾವಣಾ ಗಾಂಧಿ ಎಂದು ಕರೆಯಲು ಬಯಸುತ್ತೇನೆ’ ಎಂದು ಹೇಳಿದರು. 

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕವಿತಾ, ಈ ಹಿಂದೆ ಪಕ್ಷವು ಮುಖ್ಯಮಂತ್ರಿಗಳನ್ನು ಬದಲಾಯಿಸಲು ಬಯಸಿದಾಗಲೆಲ್ಲಾ ರಾಜ್ಯಗಳಲ್ಲಿ ಕೋಮು ಗಲಭೆಗಳು ಭುಗಿಲೆದ್ದವು. ಇಲ್ಲಿಗೆ ಬಂದು ಹಿಂದೂಗಳು ಮತ್ತು ಮುಸ್ಲಿಮರ ಬಗ್ಗೆ ವಿಲಕ್ಷಣ ಪದ ಬಳಸಿ, ವಾತಾವರಣ ಹಾಳು ಮಾಡಬೇಡಿ. ತೆಲಂಗಾಣ ಶಾಂತಿಯುತವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT