ಹೈದರಾಬಾದ್: ಬಿಆರ್ಎಸ್ ಶಾಸಕ ಕೌಶಿಕ್ ರೆಡ್ಡಿ ಅವರ ಬಂಧನದ ಹಿಂದೆಯೇ ಆ ಪಕ್ಷದ ಹಿರಿಯ ಮುಖಂಡರಾದ ಕೆ.ಟಿ.ರಾಮರಾವ್ ಮತ್ತು ಟಿ.ಹರೀಶ್ ರಾವ್ ಅವರನ್ನು ಪೊಲೀಸರು ಮಂಗಳವಾರ ‘ಗೃಹಬಂಧನ’ದಲ್ಲಿ ಇರಿಸಿದ್ದಾರೆ.

ಈ ಮುಖಂಡರನ್ನು ಅವರ ಮನೆಯಲ್ಲಿಯೇ ‘ಗೃಹಬಂಧನ’ದಲ್ಲಿರಿಸಲಾಗಿದೆ ಎಂದು ಪಕ್ಷ ಹೇಳಿದೆ. ಜ. 12ರಂದು ಕರೀಂನಗರದಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಂಜಯ್ ಕುಮಾರ್ ಅವರಿಗೆ ನಿಂದಿಸಿದ್ದ ಆರೋಪದಡಿ ಕೌಶಿಕ್ ರೆಡ್ಡಿ ಬಂಧನವಾಗಿತ್ತು.

ಕೌಶಿಕ್ ರೆಡ್ಡಿ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಪಕ್ಷಕ್ಕೆ ಮಾನ್ಯತೆ ಕುರಿತ ವಿಷಯಕ್ಕೆ ಸಂಬಂಧಿಸಿದ ಸಭೆಯಲ್ಲಿ ಕೌಶಿಕ್ ರೆಡ್ಡಿ ಮತ್ತು ಸಂಜಯ್ ಕುಮಾರ್ ಅವರು ಪರಸ್ಪರ ನಿಂದನೆಯಲ್ಲಿ ತೊಡಗಿದ್ದರು. ‘ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ಸಂಜಯ್ ಕುಮಾರ್ ಅವರ ಆಪ್ತ ಸಹಾಯಕ ಪೊಲೀಸರಿಗೆ ದೂರು ನೀಡಿದ್ದರು.

ಬಿಆರ್ಎಸ್ ಪಕ್ಷದಲ್ಲಿದ್ದ ಸಂಜಯಕುಮಾರ್ ಅವರು 2024ರ ಜೂನ್ನಲ್ಲಿ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದ್ದರು. ಕೌಶಿಕ್ರೆಡ್ಡಿ ಬಂಧನವನ್ನು ಬಿಆರ್ಎಸ್ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.