ಮಾಸ್ಕೊ: ಅಣ್ವಸ್ತ್ರ ಸಜ್ಜಿತ ಶಕ್ತಿಶಾಲಿ ‘ಬ್ಯೂರ್ವೆಸ್ಟ್ನಿಕ್’ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾನುವಾರ ಹೇಳಿದ್ದಾರೆ.

ಈ ಕ್ಷಿಪಣಿ ನಿಯೋಜನೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಸಶಸ್ತ್ರ ಪಡೆಗಳಿಗೆ ಅವರು ಆದೇಶಿಸಿದ್ದಾರೆ.

ಈ ಕ್ಷಿಪಣಿ ಕಾರ್ಯಾಚರಣೆ ವ್ಯಾಪ್ತಿಗೆ ಮಿತಿ ಇಲ್ಲ. ಇದು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವುದು ಮಾತ್ರವಲ್ಲದೇ, ಆಣುಶಕ್ತಿಯಿಂದಲೇ ಕಾರ್ಯ ನಿರ್ವಹಿಸುವುದು ವಿಶೇಷ.

ಕ್ಷಿಪಣಿ ಪರೀಕ್ಷೆ ಬಳಿಕ ಸೇನಾ ಸಿಬ್ಬಂದಿ ಮುಖ್ಯಸ್ಥ ಹಾಗೂ ಸೇನೆಯ ಇತರ ಅಧಿಕಾರಿಗಳ ಜೊತೆ ವರ್ಚುವಲ್ ಆಗಿ ಪುಟಿನ್ ಸಭೆ ನಡೆಸಿದರು.

‘‘ಬ್ಯೂರ್ವೆಸ್ಟ್ನಿಕ್’ ಬಹಳ ಶಕ್ತಿಶಾಲಿ ಕ್ರೂಸ್ ಕ್ಷಿಪಣಿಯಾಗಿದ್ದು, ಪರೀಕ್ಷಾರ್ಥ ಪ್ರಯೋಗಗಳ ವೇಳೆ ನಿರಂತರವಾಗಿ 15 ಗಂಟೆ ಹಾರಾಟ ನಡೆಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. 14 ಸಾವಿರ ಕಿ.ಮೀ.ನಷ್ಟು ದೂರ ಕ್ರಮಿಸಿದೆ’ ಎಂದು ಪುಟಿನ್ ಹೇಳಿದರು.

ಭೇಟಿ: ಇದಕ್ಕೂ ಮುನ್ನ, ಉಕ್ರೇನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಚೀಫ್ ಜನರಲ್ ಸ್ಟಾಫ್ ಜನರಲ್ ವಲೇರಿ ಗೆರಾಸಿಮೋವ್ ಅವರನ್ನು ಭೇಟಿ ಮಾಡಿದ ಪುಟಿನ್, ಕಾರ್ಯಾಚರಣೆ ಕುರಿತು ಚರ್ಚಿಸಿದರು.

‘ಉಕ್ರೇನ್ನ 10 ಸಾವಿರಕ್ಕೂ ಅಧಿಕ ಸೈನಿಕರನ್ನು ನಮ್ಮ ಪಡೆಗಳು ಸುತ್ತುವರಿದಿವೆ’ ಎಂದು ಗೆರಸಿಮೋವ್ ಈ ವೇಳೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.