ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಸಂಸದ ಅನಾರ್ ಹತ್ಯೆ: ಸ್ನೇಹಿತನೇ ಪ್ರಮುಖ ಶಂಕಿತ

Published 25 ಮೇ 2024, 15:06 IST
Last Updated 25 ಮೇ 2024, 15:06 IST
ಅಕ್ಷರ ಗಾತ್ರ

ಕೋಲ್ಕತ್ತ/ಢಾಕಾ : ‘ಬಾಂಗ್ಲಾದೇಶದ ಸಂಸದ ಅನ್ವರುಲ್‌ ಅಜೀಂ ಅನಾರ್ ಅವರ ಹತ್ಯೆ ಪ್ರಕರಣದಲ್ಲಿ ಉದ್ಯಮಿ ಅಖ್ತರುಜ್ಜಮಾಂ ಶಾಹಿನ್ ಅವರು ಪ್ರಮುಖ ಶಂಕಿತ ವ್ಯಕ್ತಿಯಾಗಿದ್ದು, ಅವರನ್ನು ವಿಚಾರಣೆಗೆ ಗುರಿಪಡಿಸಲು ಭಾರತ ಹಾಗೂ ಅಮೆರಿಕದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ‘ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸದುಜ್ಜಮಾಂ ಖಾನ್ ಹೇಳಿದ್ದಾರೆ.

ಢಾಕಾದಲ್ಲಿ ಇರುವ ಖಾನ್ ಅವರು ಪಿಟಿಐ ಜೊತೆ ಶನಿವಾರ ಮಾತನಾಡಿದರು. ‘ನಾವು ಅಖ್ತರುಜ್ಜಮಾಂ ಶಾಹೀನ್‌ ಅವರಿಗಾಗಿ ಹುಡುಕಾಟ ನಡೆಸಿದ್ದೇವೆ. ಅವರು ಪ್ರಮುಖ ಶಂಕಿತ ವ್ಯಕ್ತಿ. ಅವರನ್ನು ವಿಚಾರಣೆಗೆ ಗುರಿಪಡಿಸಲು ನಾವು ನೇಪಾಳ, ಅಮೆರಿಕ ಮತ್ತು ಭಾರತದ ಕಾನೂನು ಜಾರಿ ಸಂಸ್ಥೆಗಳಿಂದ ನೆರವು ಕೋರಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ನಮ್ಮ ಸಂಸದರ ಕುಟುಂಬಕ್ಕೆ ನ್ಯಾಯ ಕೊಡಿಸಲು ನಾವು ಇಂಟರ್‌ಪೋಲ್ ಜೊತೆಗೂ ಸಂಪರ್ಕದಲ್ಲಿ ಇದ್ದೇವೆ. ಒಬ್ಬಳು ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದೇವೆ. ಅವರಲ್ಲಿ ಇಬ್ಬರು ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಮಹಿಳೆಯ ಹಿನ್ನೆಲೆ ಏನಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಖಾನ್ ಹೇಳಿದ್ದಾರೆ. ಹತ್ಯೆಯ ಉದ್ದೇಶ ಏನು ಎಂಬುದನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT