ನವದೆಹಲಿ: ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಎಎಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಮ್ಮ ನಾಲ್ಕು ಹಾಲಿ ಸ್ಥಾನಗಳನ್ನು ಉಳಿಸಿಕೊಂಡವು. ಕೇರಳದಲ್ಲಿ ಎಡಪಂಥೀಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹೊಂದಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಕಸಿದುಕೊಂಡಿತು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಎಎಪಿಗೆ ಈ ಫಲಿತಾಂಶ ಅಲ್ಪ ಸಮಾಧಾನ ತಂದಿದೆ.

ಲೂಧಿಯಾನ ಪಶ್ಚಿಮ ಕ್ಷೇತ್ರ ಮತ್ತು ಗುಜರಾತ್ನ ವಿಸವದಾರ್ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿತು. ಕೇರಳದ ನಿಲಂಬೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ‘ಯುಡಿಎಫ್’ ಜಯ ಗಳಿಸಿತು. ಪಶ್ಚಿಮ ಬಂಗಾಳದ ಕಾಲಿಗಂಜ್ನಲ್ಲಿ ಟಿಎಂಸಿ ಗೆದ್ದಿತು. ಗುಜರಾತ್ನ ಕಡಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿತು.

ಕಡಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿಜೆಪಿಯ ಕರ್ಸನ್ಭಾಯ್ ಸೋಲಂಕಿ ನಿಧನರಾಗಿದ್ದರಿಂದ ಉಪಚುನಾವಣೆ ನಡೆಯಿತು. ಬಿಜೆಪಿಯ ರಾಜೇಂದ್ರ ಕುಮಾರ್ ಚಾವ್ಡಾ ಅವರು ಕಾಂಗ್ರೆಸ್ನ ರಮೇಶ್ಭಾಯ್ ಚಾವ್ಡಾ ಅವರನ್ನು 39,452 ಮತಗಳಿಂದ ಸೋಲಿಸಿದರು. ಎಎಪಿಯ ಜಗದೀಶ್ಭಾಯ್ ಚಾವ್ಡಾ 3,090 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.

ವಿಸವದಾರ್ನಲ್ಲಿ ಹಾಲಿ ಎಎಪಿ ಶಾಸಕ ಭಯಾನಿ ಭೂಪೇಂದ್ರಭಾಯಿ ಗಂಡುಭಾಯಿ ಅವರನ್ನು ಬಿಜೆಪಿ ಸೆಳೆದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎಎಪಿಯ ಗೋಪಾಲ್ ಇಟಾಲಿಯಾ ಅವರು ಬಿಜೆಪಿಯ ಕೀರ್ತಿ ಪಟೇಲ್ ಅವರನ್ನು ಮಣಿಸಿದರು. 2022ರಲ್ಲಿ ಎಎಪಿಯ ಗೆಲುವಿನ ಅಂತರ 6,904 ಮತಗಳಾಗಿದ್ದರೆ, ಈ ಸಲ 17,544ಕ್ಕೆ ಏರಿತು.

ಲೂಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಎಎಪಿಯ ಶಾಸಕರಾಗಿದ್ದ ಗುರುಪ್ರೀತ್ ಬಸ್ಸಿ ಗೋಗಿ ನಿಧನರಾಗಿದ್ದರು. ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಅವರನ್ನು ಪಕ್ಷ ಕಣಕ್ಕೆ ಇಳಿಸಿತ್ತು.ಅರೋರಾ ಅವರು ಕಾಂಗ್ರೆಸ್ನ ಭರತ್ ಭೂಷಣ್ ಅಶು ಅವರನ್ನು 10,637 ಮತಗಳಿಂದ ಸೋಲಿಸಿದರು. ಅರೋರಾ ರಾಜೀನಾಮೆಯಿಂದ ತೆರವಾಗುವ ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಒಂಬತ್ತು ವರ್ಷಗಳ ಅಂತರದ ನಂತರ ಕಾಂಗ್ರೆಸ್ ಪಕ್ಷವು ನಿಲಂಬೂರು ಕ್ಷೇತ್ರವನ್ನು ಗೆದ್ದುಕೊಂಡಿತು. ಪಕ್ಷದ ಅಭ್ಯರ್ಥಿ ಆರ್ಯಾಡ ನ್ ಶೌಕತ್ ಅವರು ಸಿಪಿಎಂನ ಎಂ. ಸ್ವರಾಜ್ ಅವರನ್ನು 11,077 ಮತಗಳ ಅಂತರದಿಂದ ಮಣಿಸಿದರು. ಸಿಪಿಐಎಂ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ರಾಜೀನಾಮೆ ನೀಡಿದ್ದರು. ಕಾಳಿಗಂಜ್ನಲ್ಲಿ ಟಿಎಂಸಿ ಅಲಿಫಾ ಅಹ್ಮದ್ ಬಿಜೆಪಿಯ ಆಶಿಶ್ ಘೋಷ್ ಅವರನ್ನು 50,049 ಮತಗಳಿಂದ ಸೋಲಿಸಿದರು. ಕಾಂಗ್ರೆಸ್ನ ಕಬಿಲುದ್ದೀನ್ ಶೇಖ್ 28,348 ಮತ ಪಡೆದು ಮೂರನೇ ಸ್ಥಾನ ಪಡೆದರು.

ರಾಜ್ಯಸಭೆಗೆ ಹೋಗಲ್ಲ: ಕೇಜ್ರಿವಾಲ್

ನವದೆಹಲಿ (ಪಿಟಿಐ): ‘ರಾಜ್ಯಸಭೆಗೆ ಹೋಗುವ ಯಾವುದೇ ಇಚ್ಛೆ ಹೊಂದಿಲ್ಲ’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಪಶ್ಚಿಮ ಲೂಧಿಯಾನ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಜಯ ಸಾಧಿಸಿದ್ದಾರೆ. ಹೀಗಾಗಿ, ಅರೋರಾ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ‘ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಅಭ್ಯರ್ಥಿಯ ಹೆಸರು ಸೂಚಿಸಲಿದೆ’ ಎಂದು ಕೇಜ್ರಿವಾಲ್ ತಿಳಿಸಿದರು.

ಸೆಮಿಫೈನಲ್ ಇದ್ದಂತೆ: ಉಪಚುನಾವಣೆಯಲ್ಲಿನ ಗೆಲುವು 2027ರ ಚುನಾವಣೆಯ ಸೆಮಿಫೈನಲ್. ಈ ಫಲಿತಾಂಶದಿಂದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಜನರು ಸ್ಪಷ್ಟವಾಗಿ ತಿರಸ್ಕರಿಸಿರುವ ಸೂಚನೆ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.