ನವದೆಹಲಿ: ಕ್ಯಾಬ್ ಹಣ ನೀಡಲು ನಿರಾಕರಿಸಿದ ಪ್ರಯಾಣಿಕ ಮತ್ತು ಆತನ ಸ್ನೇಹಿತರು ಕ್ಯಾಬ್ ಚಾಲಕನೊಂದಿಗೆ ಗಲಾಟೆ ನಡೆಸಿ, ಆತನನ್ನು ಕೊಂದಿರುವ ಘಟನೆ ದೆಹಲಿಯ ಸೋನಿಯಾ ವಿಹಾರ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಡಿಸೆಂಬರ್ 18ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ರಾಪಿಡೋ ಟ್ಯಾಕ್ಸಿ ಚಾಲಕ ಸಂದೀಪ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ಸಂಪಾದಕೀಯ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಕಳಕಳಿಗೆ ಸ್ಪಂದಿಸಲಿ ಸರ್ಕಾರ.ಚರ್ಚೆ | ಅತುಲ್ ಸುಭಾಷ್ ಆತ್ಮಹತ್ಯೆ: ಪ್ರತ್ಯೇಕ ವ್ಯಾಖ್ಯಾನ ಅಗತ್ಯ.
ಸೋನಿಯಾ ವಿಹಾರ್ನಿಂದ ಪುಸ್ತಾ 2ಗೆ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ತಲುಪಿದ ಬಳಿಕ ₹400 ಕ್ಯಾಬ್ ದರ ನೀಡುವಂತೆ ಸಂದೀಪ್ ಕೇಳಿದ್ದಾರೆ. ಹಣ ನೀಡದೆ, ಜಗಳ ಶುರು ಮಾಡಿದ ಆರೋಪಿಗಳು ಕ್ಯಾಬ್ ಚಾಲಕನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಕ್ಯಾಬ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಹಾಗೂ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯ ವಿವರ ಸಂಗ್ರಹಿಸಿದ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
.ಉಪೇಂದ್ರ ನಟನೆಯ ಯುಐ ಸಿನಿಮಾ ವಿಮರ್ಶೆ | ಮಿದುಳಿಗೆ ಕೈ ಇಡುವ ಜಗತ್ತು!.ತಮಿಳುನಾಡು | ಬಿಜೆಪಿಯಿಂದ ಕರಾಳ ದಿನಾಚರಣೆ: ಅಣ್ಣಾಮಲೈ ಸೇರಿ RSS ಮುಖಂಡರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.