ಟೊರಾಂಟೊ: ಕೆನಡಾದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ವೆಸ್ಟ್‌ಜೆಟ್ ತನ್ನ 407 ವಿಮಾನಯಾನಗಳನ್ನು ರದ್ದುಗೊಳಿಸಿತು. ಇದರಿಂದ 49 ಸಾವಿರ ಪ್ರಯಾಣಿಕರು ಪರದಾಡಬೇಕಾಯಿತು. ವಿಮಾನ ನಿರ್ವಹಣಾ ಕಾರ್ಮಿಕರ ಒಕ್ಕೂಟ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರಿಂದ ವಿಮಾನಗಳ ಸಂಚಾರವನ್ನು ರದ್ದುಗೊಳಿಸಬೇಕಾಯಿತು.

’ಸಂಸ್ಥೆಯು ಒಕ್ಕೂಟದ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ತೋರದ ಕಾರಣ ಸದಸ್ಯರು ಶುಕ್ರವಾರ ಸಂಜೆ ಮುಷ್ಕರ ಆರಂಭಿಸಿದರು‘ ಎಂದು ದಿ ಏರ್‌ಕ್ರಾಫ್ಟ್ ಫ್ರಟೆರ್ನಲ್ ಅಸೋಸಿಯೇಷನ್ಸ್ ಹೇಳಿದೆ.

ಸೋಮವಾರ ‘ಕೆನಡಾ ದಿನ’ ಆಚರಣೆ ಇದ್ದ ಕಾರಣ ಅಲ್ಲಿಯ ಜನರಿಗೆ ದೀರ್ಘ ವಾರಾಂತ್ಯವಿತ್ತು. ಹೀಗಾಗಿ, ಈ ಮುಷ್ಕರದಿಂದ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನಕ್ಕೆ ತೊಡಕುಂಟಾಗಿದೆ ಎನ್ನಲಾಗಿದೆ.

ಈ ಅಡಚಣೆಗೆ ಒಕ್ಕೂಟವನ್ನೇ ಗುರಿಮಾಡಿ ಮಾತನಾಡಿರುವ ಸಂಸ್ಥೆಯ ಸಿಇಒ, ‘ಅಮೆರಿಕದ ದುಷ್ಟರ ಒಕ್ಕೂಟವು ಕೆನಡಾದಲ್ಲಿ ಗೂಂಡಾವರ್ತನೆ ತೋರುತ್ತಿದೆ’ ಎಂದಿದ್ದಾರೆ.

‘ಗೌರವಯುತವಾಗಿ ಸಮಾಲೋಚನೆ ನಡೆಸಿ’ ಎನ್ನುವುದು ಸಂಸ್ಥೆ ಎದುರು ನಾವು ಇರಿಸಿರುವ ಒತ್ತಾಯ. ಅದರ ಈಡೇರಿಕೆ ನಿಟ್ಟಿನಲ್ಲಿ ಈ ಮುಷ್ಕರವು ಒಂದು ಪ್ರಯತ್ನವಾಗಿದೆ. ಪ್ರಯಾಣಿಕರಿಗೆ ಇದರಿಂದ ತೊಂದರೆಯಾದರೆ ಒಕ್ಕೂಟ ವಿಷಾದಿಸುತ್ತದೆ’ ಎಂದು ಮುಷ್ಕರನಿರತ ಕಾರ್ಮಿಕರಲ್ಲಿ ಒಬ್ಬರು ಹೇಳಿದ್ದಾರೆ.

ಪ್ರಯಾಣಿಕರ ಆಕ್ರೋಶ: ‘ನಮ್ಮ ಪ್ರಯಾಣವನ್ನು ಸೋಮವಾರಕ್ಕೆ ಮುಂದೂಡಿರುವುದಾಗಿ ವಿಮಾನಯಾನ ಸಂಸ್ಥೆಯಿಂದ ಇ–ಮೇಲ್ ದೊರಕಿತು. ಕುಟುಂಬ ಸಮೇತ ಪ್ರವಾಸ ಹೋಗಲು ನಾವು 8 ತಿಂಗಳಿನಿಂದ ಕನಸು ಕಂಡಿದ್ದೆವು. ಇನ್ನು ಮುಂದೆ ನಾವು ಯಾರೂ ವೆಸ್ಟ್‌ಜೆಟ್‌ನ ಗ್ರಾಹಕರಾಗಿ ಉಳಿಯುವುದಿಲ್ಲ’ ಎಂದು ಪ್ರಯಾಣಿಕರಾದ ಸಮಿನ್ ಸಹನ್ ಮತ್ತು ಸಮೀ ಜಾನ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.