ಭಾರತದ ಆಂತರಿಕ ವಿಷಯಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿರುವ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭಾರತ ಮತ್ತು ಕೆನಡಾದಲ್ಲಿರುವ ಉಭಯ ದೇಶಗಳ ರಾಜತಾಂತ್ರಿಕರ ಸಂಖ್ಯೆ ಸಮವಾಗಿರಬೇಕು ಎಂಬ ಉದ್ದೇಶದಿಂದ ಇಂತಹ ಸೂಚನೆ ನೀಡಲಾಗಿತ್ತು.
-ಅರಿಂದಮ್ ಬಾಗ್ಚಿ, ವಿದೇಶಾಂಗ ಸಚಿವಾಲಯ ವಕ್ತಾರ
ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತನಗೆ ಭಾರತ ಸೂಚಿಸಿದ್ದು ಈ ನಿರ್ಧಾರದಿಂದ ಎರಡೂ ದೇಶಗಳ ಪ್ರಜೆಗಳಿಗೆ ಕೆನಡಾ ಹೈಕಮಿಷನ್ ಹಾಗೂ ಕಾನ್ಸುಲೇಟ್ ಕಚೇರಿಗಳಲ್ಲಿ ಸಿಗುತ್ತಿದ್ದ ಸೇವೆಗಳ ಮೇಲೆ ಪರಿಣಾಮ ಉಂಟಾಗಲಿದೆ.