ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಪ್ರದೇಶ: ಮನೆಕೆಲಸದ ಬಾಲಕಿಗೆ ಕಿರುಕುಳ,ಹಲ್ಲೆ: SP ಶಾಸಕನ ವಿರುದ್ಧ ಪ್ರಕರಣ

Published : 14 ಸೆಪ್ಟೆಂಬರ್ 2024, 14:31 IST
Last Updated : 14 ಸೆಪ್ಟೆಂಬರ್ 2024, 14:31 IST
ಫಾಲೋ ಮಾಡಿ
Comments

ಭದೋಹಿ: ‘ಮನೆಕೆಲಸದ ಬಾಲಕಿಗೆ ಕಿರುಕುಳ ನೀಡಿ, ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಶಾಸಕ ಹಾಗೂ ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಶನಿವಾರ ತಿಳಿಸಿದರು.

‘ಶುಕ್ರವಾರ ರಾತ್ರಿ ಮಕ್ಕಳ ರಕ್ಷಣಾ ಸಮಿತಿಯ ಮುಖ್ಯಸ್ಥ ಪಿ.ಸಿ. ಉಪಾಧ್ಯಾಯ ಸಲ್ಲಿಸಿದ ಶಿಫಾರಸಿನಂತೆ, ಕಾರ್ಮಿಕ ವಿಭಾಗದ ಅಧಿಕಾರಿಗಳು ಶಾಸಕ ಜಹೀದ್‌ ಬೇಗ್‌, ಪತ್ನಿ ಸೀಮಾ ಬೇಗ್‌ ವಿರುದ್ಧ ಸಲ್ಲಿಸಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಾಸಕರ ಮನೆಯಲ್ಲಿ ಮತ್ತೋರ್ವ ಬಾಲಕಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆ ಭದೋಹಿ ಪೊಲೀಸರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 17 ವರ್ಷದ ಬಾಲಕಿಯನ್ನು ರಕ್ಷಿಸಲಾಯಿತು’ ಎಂದರು.

‘ಪೊಲೀಸರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಗರದ ಮಾಲಿಕಾನ ಮೊಹಲ್ಲಾದಲ್ಲಿರುವ ಶಾಸಕ ಬೇಗ್‌ ನಿವಾಸದಿಂದ ಬಾಲಕಿಯನ್ನು ರಕ್ಷಿಸಲಾಯಿತು. ಶಾಸಕರು ಹಾಗೂ ಪತ್ನಿ ವಿರುದ್ಧ ಕಾರ್ಮಿಕ ಅಧಿಕಾರಿ ಜೈ ಪ್ರಕಾಶ್‌ ಸಿಂಗ್‌ ಅವರು ದೂರು ನೀಡಿದ್ದರು’ ಎಂದು ಭದೋಹಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೀನಾಕ್ಷಿ ಕಾತ್ಯಾಯನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT