ಪಾಟ್ನಾ: ಜಾತಿ ಗಣತಿಯ ಬೇಡಿಕೆಯನ್ನು ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್ ಬುಧವಾರ ಪುನರುಚ್ಚರಿಸಿದ್ದು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಜನಸಂಖ್ಯೆಯು ಅರ್ಧಕ್ಕಿಂತ ಹೆಚ್ಚಿರುವುದು ಕಂಡುಬಂದಲ್ಲಿ ಮೀಸಲಾತಿಯ ಮೇಲಿನ ಶೇ 50 ಮಿತಿಯನ್ನು ಮುರಿಯಬಹುದು ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ದೆಹಲಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಲಾಲು ಪ್ರಸಾದ್, ಇಲ್ಲಿ ಆಯೋಜಿಸಲಾದ ತಮ್ಮ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರ ಉದ್ದೇಶಿಸಿ ಮಾತನಾಡಿದರು.

‘ಜಾತಿ ಗಣತಿಯ ಬೇಡಿಕೆಯನ್ನು ಮೊದಲು ಪ್ರಸ್ತಾಪಿಸಿದ್ದು ನಾನು. ಸಂಸತ್ತಿನ ಕಲಾಪದಲ್ಲಿ ಈ ಬೇಡಿಕೆ ಇಟ್ಟಿದ್ದೆ’ ಎಂದು ಯುಪಿಎ -1ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಹೇಳಿದರು.

‘ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಎಲ್ಲರ ಕಲ್ಯಾಣಕ್ಕಾಗಿ ನನ್ನ ಬೇಡಿಕೆ. ಸ್ವಾತಂತ್ರ್ಯದ ಮೊದಲು ನಡೆಸಿದ ಗಣತಿಯನ್ನು ಗಣನೆಗೆ ತೆಗೆದುಕೊಂಡು ಮೀಸಲಾತಿ ಕೋಟಾ ನಿರ್ಧರಿಸಲಾಗಿದೆ. ಈಗಿರುವ ಮೀಸಲಾತಿ ಕೋಟಾ ಸಾಕಷ್ಟಿಲ್ಲ. ಜಾತಿ ಗಣತಿ ಹೊಸದಾಗಿ ನಡೆಯಲಿ ಮತ್ತು ಎಲ್ಲರೂ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲಿ. ಇದಕ್ಕೆ ಶೇ 50ರ ಮೀಸಲಾತಿಯ ತಡೆಗೋಡೆಯನ್ನು ಒಡೆಯುವ ಅಗತ್ಯವಿದ್ದಲ್ಲಿ, ಅದೂ ಕಾರ್ಯರೂಪಕ್ಕೆ ಬರಲಿ’ ಎಂದು ಲಾಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.