ಅಲಹಾಬಾದ್: ವ್ಯಕ್ತಿಯೊಬ್ಬನ ಜಾತಿಯು ಜನನದಿಂದಲೇ ನಿರ್ಧಾರವಾಗಿರುತ್ತದೆ. ಮದುವೆ ಅಥವಾ ಮತಾಂತರದ ಬಳಿಕವೂ ಅದು ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಒಂದು ವೇಳೆ, ಒಬ್ಬ ಮಹಿಳೆ ಬೇರೆ ಜಾತಿ ವ್ಯಕ್ತಿಯನ್ನು ಮದುವೆಯಾದಲ್ಲಿ ಆಕೆಯ ಮೂಲ ಜಾತಿ ರದ್ದುಗೊಂಡಿದೆ ಎಂಬುದಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಮೂರ್ತಿ ಅನಿಲ ಕುಮಾರ್ ಅವರು ಇದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಪರಿಶಿಷ್ಟ ಜಾತಿ/ಪಂಗಡ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ಗಳಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ದಿನೇಶ್ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಪೀಠ ಈ ಮಾತು ಹೇಳಿದೆ.

‘ಅರ್ಜಿದಾರರು(ದಿನೇಶ್ ಹಾಗೂ ಇತರರು) ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಜಾತಿ ಹೆಸರು ತೆಗೆದುಕೊಂಡು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ನೀಡಿದ ದೂರಿನ ಅನ್ವಯ ಈ ಪ್ರಕರಣ ದಾಖಲಿಸಲಾಗಿದೆ.

ಅರ್ಜಿದಾರರ ವಾದ: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯು ಪಶ್ಚಿಮ ಬಂಗಾಳದವರು. ಜಾಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆ ಮಾಡಿಕೊಂಡಿದ್ದಾರೆ. ಹೀಗಾಗಿ, ತನ್ನ ಮೂಲ ಜಾತಿಯಿಂದಾಗಿ ಸಿಗುವ ಪ್ರಯೋಜನಗಳನ್ನು ಪಡೆಯಲು ಆಕೆ ಅರ್ಹಳಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.

‘ಪ್ರಬಲ ಜಾತಿಯ ವ್ಯಕ್ತಿಯನ್ನು ಮದುವೆಯಾಗಿರುವ ಕಾರಣ ಆಕೆಯು ‘ಪರಿಶಿಷ್ಟ ಜಾತಿ’ ಸ್ಥಾನಮಾನ ಕಳೆದುಕೊಂಡಿದ್ದಾಳೆ. ಎಸ್ಸಿ/ಎಸ್ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ನಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳು ಸಮರ್ಥನೀಯವಲ್ಲ ಹಾಗೂ ಅವುಗಳನ್ನು ವಜಾಗೊಳಿಸಬೇಕು’ ಎಂದು ದಿನೇಶ್ ಹಾಗೂ ಇತರರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

‘ಮಹಿಳೆ ನಮ್ಮ ವಿರುದ್ಧ ವಿವಿಧ ಕಾಯ್ದೆಗಳಡಿ ದೂರು ದಾಖಲಿಸುವ ಮೊದಲೇ ನಾವು ಆಕೆ ವಿರುದ್ಧ ದೂರು ದಾಖಲಿಸಿದ್ದೆವು’ ಎಂದೂ ಅವರು ಮೇಲ್ಮನವಿಯಲ್ಲಿ ವಿವರಿಸಿದ್ದಾರೆ.

‘ಆಕೆ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂಬ ಅಂಶವು ಅರ್ಜಿದಾರರ ವಿರುದ್ಧ ಆಕೆ ದಾಖಲಿಸಿರುವ ಪ್ರಕರಣ ಕೈಬಿಡುವುದಕ್ಕೆ ಆಧಾರವಾಗದು’ ಎಂದು ಹೇಳಿದ ಹೈಕೋರ್ಟ್, ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.