ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಕಾರ್ಪೊರೇಟ್ ಮಧ್ಯವರ್ತಿ ದೀಪಕ್ ತಲ್ವಾರ್ ವಿರುದ್ಧ ಸಿಬಿಐ ಸೋಮವಾರ ದೋಷಾರೋಪಪಟ್ಟಿ ಸಲ್ಲಿಸಿದೆ.

ವಿಶೇಷ ನ್ಯಾಯಾಧೀಶ ಅನಿಲ್ ಕುಮಾರ್ ಸಿಸೋಡಿಯಾ ಅವರಿಗೆ ಅಂತಿಮ ವರದಿ ಸಲ್ಲಿಸಲಾಗಿದೆ. ದೋಷಾರೋಪಪಟ್ಟಿಯಲ್ಲಿ ಆರೋಪಿಯ ನಿಕಟ ಸಹವರ್ತಿಯಾಸೀನ್ ಕಪೂರ್ ಮತ್ತು ಮಾಯಾ ಬಿ ಪುರಿ ಅವರ ಹೆಸರು ಇದೆ.

ಅಕ್ಟೋಬರ್ 1ರಂದು ಈ ಪ್ರಕರಣ ನ್ಯಾಯಾಲಯ ಮುಂದೆ ವಿಚಾರಣೆಗೆ ಬರಲಿದೆ.

ಯುಪಿಎ ಅವಧಿಯಲ್ಲಿ ಫ್ರಾನ್ಸ್‌ನ ಏರ್‌ಬಸ್ ಇಂಡಸ್ಟ್ರಿಯಿಂದ ಇಂಡಿಯನ್ ಏರ್‌ಲೈನ್ಸ್‌ಗೆ ವಿಮಾನಗಳನ್ನು ಖರೀದಿಸುವ ಒಪ್ಪಂದದಲ್ಲಿ ತಲ್ವಾರ್ ಲಾಬಿ ನಡೆಸಿದ್ದರು ಎಂಬ ಆರೋಪವಿದೆ. ಕಳೆದ ಜನವರಿಯಲ್ಲಿ ದುಬೈನಿಂದ ಗಡಿಪಾರಾದ ತಲ್ವಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.