ಹೈದರಾಬಾದ್: ಅತ್ಯಾಚಾರಕ್ಕೀಡಾಗಿ 2007ರಲ್ಲಿ ಮೃತಪಟ್ಟಿದ್ದ ಆಯೇಷಾ ಮೀರಾ ಅವರ ಮೃತದೇಹವನ್ನು ನ್ಯಾಯಾಲಯದ ಆದೇಶದಂತೆ ಅವರ ಕುಟುಂಬಸ್ಥರಿಗೆ ಸಿಬಿಐ ಶುಕ್ರವಾರ ಹಸ್ತಾಂತರಿಸಿದೆ.

ನ್ಯಾಯಾಲಯದ ಆದೇಶದಂತೆ ಕಳೆದ ವರ್ಷ ಮರುಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವು ಖುಲಾಸೆಯಾಗಿರುವುದರಿಂದ ಆಯೇಷಾ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಮರಳಿಸುವಂತೆ ಸಿಬಿಐ ನ್ಯಾಯಾಲಯ ಆದೇಶಿಸಿತ್ತು.

ಬಿ–ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದ ಆಯೇಷಾ ಅವರು ಮಹಿಳಾ ವಸತಿನಿಲಯದ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಸೆಷನ್ಸ್ ಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸತ್ಯಂಬಾಬು ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿರುವ ಕಾರಣ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆಯೇಷಾ ಪೋಷಕರು ಮೇಲ್ಮನವಿ ಸಲ್ಲಿಸಿದ ಕಾರಣ ಸಿಬಿಐ ಮರುತನಿಖೆಗೆ ಹೈಕೋರ್ಟ್ ಆದೇಶಿಸಿತ್ತು. ಸಿಬಿಐ ನೀಡಿದ್ದ ಅಂತಿಮ ವರದಿಯು ನ್ಯಾಯಾಲಯವು ಇತ್ತೀಚೆಗೆ ಅಂಗೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.