ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಾಂಜಲಿ@75’, ‘ಸಂವಿಧಾನ ರೂಪುಗೊಂಡ ಬಗೆ’: ಇ–ಫೋಟೊ ಪ್ರದರ್ಶನಕ್ಕೆ ಚಾಲನೆ

Last Updated 28 ಆಗಸ್ಟ್ 2021, 12:37 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸ್ವಾತಂತ್ರ್ಯ ಪಯಣದ ಮೈಲಿಗಲ್ಲುಗಳನ್ನು ಬಿಂಬಿಸಲು ‘ಸಂವಿಧಾನ ರೂಪುಗೊಂಡ ಬಗೆ’ ಇ–ಫೋಟೊ ಪ್ರದರ್ಶನ ಮತ್ತು ‘ಚಿತ್ರಾಂಜಲಿ@75’ ವರ್ಚುವಲ್ ಸಿನಿಮಾ ಪೋಸ್ಟರ್ ಪ್ರದರ್ಶನಕ್ಕೆ ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಮತ್ತು ಅನುರಾಗ್ ಠಾಕೂರ್ ಚಾಲನೆ ನೀಡಿದ್ದಾರೆ.

ಪ್ರದರ್ಶನವು ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ 11 ಪ್ರಾದೇಶಿಕ ಭಾಷೆಗಳಲ್ಲಿಯೂ ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ದೇಶಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿ ತೆರೆಯ ಮರೆಯ ಹಿಂದೆ ಉಳಿದವರ ಯಶೋಗಾಥೆಯನ್ನು ಜನರಿಗೆ ಪರಿಚಯಿಸಲು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿವಿಧ ಮಾಧ್ಯಮ ಘಟಕಗಳ ಸಹಯೋಗದೊಂದಿಗೆ ‘ಐಕಾನಿಕ್ ವೀಕ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂವಿಧಾನವು ರೂಪುಗೊಂಡ ಬಗೆಯನ್ನು ಜನರಿಗೆ ತಿಳಿಸುವ ಸಲುವಾಗಿ ಫೋಟೊ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಭಾರತದ ಸಂವಿಧಾನದ ಮೂಲ ತತ್ವಗಳನ್ನು ಪ್ರಚಾರ ಮಾಡಲು ಮತ್ತು ಈ ಕೆಲಸದಲ್ಲಿ ಯುವಜನರು ಪಾಲ್ಗೊಳ್ಳುವಂತೆ ಉತ್ತೇಜಿಸಲು ಸರ್ಕಾರ ಶೀಘ್ರದಲ್ಲೇ ‘ನಿಮ್ಮ ಸಂವಿಧಾನವನ್ನು ತಿಳಿಯಿರಿ’ ಎಂಬ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಠಾಕೂರ್ ಘೋಷಿಸಿದ್ದಾರೆ.

‘ಡಿಜಿಟಲ್ ಕ್ರಾಂತಿಗೆ ಅನುಗುಣವಾಗಿ ನಾವು ಈ ಸಂಕಲನವನ್ನು ಡಿಜಿಟಲ್ ಸ್ವರೂಪದಲ್ಲಿ ಬಿಡುಗಡೆ ಮಾಡಿದ್ದೇವೆ. ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಹನ್ನೊಂದು ಭಾರತೀಯ ಭಾಷೆಗಳಲ್ಲಿ ಈ ಡಿಜಿಟಲ್ ಕೃತಿ ಬಿಡುಗಡೆಯಾಗಲಿದೆ’ ಎಂದು ಸಚಿವರು ಹೇಳಿದ್ದಾರೆ.

ವರ್ಚುವಲ್ ಪ್ರದರ್ಶನವು ವಿಡಿಯೋಗಳು, ಭಾಷಣಗಳ ಸಂಗ್ರಹಗಳ ಜತೆಗೆ ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮವನ್ನೂ ಹೊಂದಿದೆ. ಇದರಲ್ಲಿ ಭಾಗವಹಿಸಿ ಇ-ಪ್ರಮಾಣಪತ್ರ ಪಡೆಯಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

‘ಚಿತ್ರಾಂಜಲಿ@75’ ವರ್ಚುವಲ್ ಪೋಸ್ಟರ್ ಪ್ರದರ್ಶನವು 75 ವರ್ಷಗಳ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುತ್ತದೆ. ಜತೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಸಮಾಜ ಸುಧಾರಕರು ಮತ್ತು ನಮ್ಮ ಸೈನಿಕರ ಶೌರ್ಯದ ಪವಿತ್ರ ನೆನಪುಗಳ ಮೆಲುಕಿಗೆ ಕಾರಣವಾಗಲಿದೆ ಎಂಬ ಖಾತರಿ ನನಗಿದೆ. ಅಂಥ 75 ಅಪ್ರತಿಮ ಚಲನಚಿತ್ರಗಳನ್ನು ನಮ್ಮ ಪೋಸ್ಟರ್ ಪ್ರದರ್ಶನದಲ್ಲಿ ಸೇರಿಸಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT