ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆಯೊಡ್ಡಿ ಚಂಡೀಗಢ ಪಾಲಿಕೆ ಸದಸ್ಯರ ಖರೀದಿ: ಎಎಪಿ ಆರೋಪ

Published 19 ಫೆಬ್ರುವರಿ 2024, 15:34 IST
Last Updated 19 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಚಂಡೀಗಢ: ಅಕ್ರಮ ಮಾರ್ಗದಿಂದ ಹಾಗೂ ಬೆದರಿಕೆಯೊಡ್ಡುವ ಮೂಲಕ ಚಂಡೀಗಢ ಮಹಾನಗರ ಪಾಲಿಕೆಯ ಸದಸ್ಯರನ್ನು ಬಿಜೆಪಿ ಖರೀದಿಸಿದೆ ಎಂದು ಎಎಪಿ ಸೋಮವಾರ ಆರೋಪಿಸಿದೆ.

ಚಂಡೀಗಢ ಮಹಾನಗರ ಪಾಲಿಕೆಯ ಎಎಪಿ ಸದಸ್ಯರಾದ ನೇಹಾ, ಪೂನಂ ಮತ್ತು ಗುರುಚರಣ್‌ ಕಾಲಾ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಬಿಜೆಪಿ ಮುಖಂಡ ಮನೋಜ್‌ ಸೋನ್‌ಕರ್‌ ಅವರು ಚಂಡೀಗಢ ಮೇಯರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿತ್ತು. ಮೇಯರ್‌ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವುದಕ್ಕೂ ಮುನ್ನಾದಿನ ಅವರು ರಾಜೀನಾಮೆ ನೀಡಿದ್ದರು.

‘ಪಾಲಿಕೆ ಸದಸ್ಯರನ್ನು ಖರೀದಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ‘ಆಪರೇಶ‌ಷನ್‌ ಕಮಲ’ದ ಅಂಗವಾಗಿ ಈ ಬೆಳವಣಿಗೆ ನಡೆದಿದೆ’ ಎಂದು ಎಎಪಿ ಚಂಡೀಗಢ ಘಟಕದ ಅಧಕ್ಷ ಸನ್ನಿ ಅಹ್ಲುವಾಲಿಯಾ ಆರೋಪಿಸಿದರು.

ಮೇಯರ್‌ ಚುನಾವಣೆಯು ಬಿಜೆಪಿಯ ನಿಜಬಣ್ಣವನ್ನು ಜನರ ಮುಂದಿರಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT