ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸಿರಬಹುದು: ಚಂದ್ರಯಾನ-1ರ ದತ್ತಾಂಶ

Published 15 ಸೆಪ್ಟೆಂಬರ್ 2023, 8:53 IST
Last Updated 15 ಸೆಪ್ಟೆಂಬರ್ 2023, 8:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಚಂದ್ರಯಾನ-1ರ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಹೇಳಿದ್ದಾರೆ.

ಭೂಮಿಯ ಪ್ಲಾಸ್ಮಾ ಶೀಟ್‌ನಲ್ಲಿರುವ ಈ ಎಲೆಕ್ಟ್ರಾನ್‌ಗಳು ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಮತ್ತು ಖನಿಜಗಳನ್ನು ಒಡೆಯುವ ಅಥವಾ ಕರಗಿಸುವಂತಹ ಪ್ರಕ್ರಿಯೆಗೆ ಕಾರಣವಾಗಿದೆ ಎಂದು ಅಮೆರಿಕದ ಹವಾಯಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.

ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನಾ ವರದಿಯಲ್ಲಿ, ಚಂದ್ರನ ಮೇಲ್ಮೈನಲ್ಲಿ ನೀರಿನ ರಚನೆಗೆ ಎಲೆಕ್ಟ್ರಾನ್‌ಗಳು ಸಹಾಯ ಮಾಡಿರಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ.

ಚಂದ್ರನ ಮೇಲೆ ನೀರಿನ ಸಾಂದ್ರತೆಗಳು ಮತ್ತು ಹಂಚಿಕೆಗಳ ಬಗ್ಗೆ ಅರಿಯುವುದರಿಂದ ಅದರ ರಚನೆ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳಲು ಹಾಗೂ ಭವಿಷ್ಯದ ಮಾನವ ಪರಿಶೋಧನೆಗೆ ಸಹಾಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಹೊಸ ಸಂಶೋಧನೆಯು ಚಂದ್ರನ ಮೇಲೆ ಶಾಶ್ವತವಾಗಿ ಮಬ್ಬಾಗಿರುವ ಪ್ರದೇಶಗಳಲ್ಲಿ ಹಿಂದೆ ಪತ್ತೆಯಾಗಿರುವ ಮಂಜುಗಡ್ಡೆಯ ಮೂಲವನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಚಂದ್ರನ ಮೇಲಿನ ನೀರಿನ ಕಣಗಳ ಆವಿಷ್ಕಾರದಲ್ಲಿ ಚಂದ್ರಯಾನ-1 ನಿರ್ಣಾಯಕ ಪಾತ್ರ ವಹಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT