ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3: ನಿದ್ದೆಗೆ ಜಾರಿದ ‘ಪ್ರಜ್ಞಾನ್’

Published 3 ಸೆಪ್ಟೆಂಬರ್ 2023, 14:34 IST
Last Updated 3 ಸೆಪ್ಟೆಂಬರ್ 2023, 14:34 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–3ರ ರೋವರ್‌ ‘ಪ್ರಜ್ಞಾನ್‌’ ಚಂದ್ರನ ಅಂಗಳದಲ್ಲಿ ಒಂದು ದಿನದ (ಭೂಮಿಯ 14 ದಿನಗಳು) ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅಲ್ಲಿ ಕತ್ತಲು ಆವರಿಸಿರುವುದರಿಂದ, ಅದರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಉಪಕರಣಗಳನ್ನು (ಪೇಲೋಡ್‌) ಸ್ಲೀಪ್‌ ಮೋಡ್‌ಗೆ ಹಾಕಲಾಗಿದೆ ಎಂದು ಇಸ್ರೊ ತಿಳಿಸಿದೆ.

ರೋವರ್‌ನಲ್ಲಿರುವ ಎಪಿಎಕ್ಸ್‌ಎಸ್‌ ಮತ್ತು ಲಿಬ್ಸ್‌ ಉಪಕರಣಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಹೀಗಾಗಿ ಇವುಗಳಿಂದ ಲ್ಯಾಂಡರ್‌ ಮೂಲಕ ಭೂಮಿಗೆ ರವಾನೆಯಾಗುತ್ತಿದ್ದ ಮಾಹಿತಿಗಳೂ ನಿಂತು ಹೋಗಿವೆ. ಇವುಗಳಿಗೆ ಅಳವಡಿಸಿರುವ ಬ್ಯಾಟರಿಗಳು ಪೂರ್ಣ ಚಾರ್ಜ್‌ ಆಗಿವೆ.

ಸೆ.22ರಂದು ಚಂದ್ರನಲ್ಲಿ ಸೂರ್ಯೋದಯ ಆಗುವುದರಿಂದ ಅಂದು ಸೌರಫಲಕಗಳಿಗೆ ಬೆಳಕು ಸಿಗುತ್ತದೆ. ಆಗ ಮತ್ತೆ ಲ್ಯಾಂಡರ್ ಮತ್ತು ರೋವರ್‌ ಎಚ್ಚರಗೊಳ್ಳಬಹುದು. ಇನ್ನಷ್ಟು ಕೆಲಸಗಳನ್ನು ಅವುಗಳಿಂದ ನಿರೀಕ್ಷಿಸಬಹುದು ಎಂಬ ಆಶಯವನ್ನು ಇಸ್ರೊ ವ್ಯಕ್ತಪಡಿಸಿದೆ. ಅಲ್ಲದೇ, ಚಂದ್ರನಲ್ಲಿ ಭಾರತದ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯಬಹುದು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT