ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ | ಸ್ಫೋಟದಲ್ಲಿ ಯೋಧ ಹುತಾತ್ಮ: ನಾಲ್ವರು ಶಂಕಿತ ನಕ್ಸಲರ ಬಂಧನ

Published 16 ಡಿಸೆಂಬರ್ 2023, 12:52 IST
Last Updated 16 ಡಿಸೆಂಬರ್ 2023, 12:52 IST
ಅಕ್ಷರ ಗಾತ್ರ

ರಾಯ್‌ಪುರ: ಛತ್ತೀಸಗಢದ ಕಂಕೆರ್‌ ಜಿಲ್ಲೆಯಲ್ಲಿ ಡಿಸೆಂಬರ್ 14 ರಂದು ನಡೆದ ಸ್ಫೋಟದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ ಹುತಾತ್ಮರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಶಂಕಿತ ನಕ್ಸಲರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು (ಶನಿವಾರ) ಬೆಳಿಗ್ಗೆ ಪರ್ತಾಪುರದ ಅರಣ್ಯ ಪ್ರದೇಶದಲ್ಲಿ ನಕ್ಸಲರನ್ನು ಬಂಧಿಸಲಾಯಿತು. ಬಂಧಿತರನ್ನು ಮುಕುಂದ್‌ ನರ್ವಾಸ್‌ (45), ಜಗ್ಗು ರಾಮ್‌ ಅಂಚಲಾ (45), ಅರ್ಜುನ್‌ ಪೊಟೈ (26) ಮತ್ತು ದಶರತ್‌ ದುಗ್ಗಾ (35) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಾವೋವಾದಿಗಳ ಜನ್‌ ಮಿಲಿಷಿಯಾ ಸದಸ್ಯರು ಹಾಗೂ ಪರ್ತಾಪುರ ಗ್ರಾಮದ ಸ್ಥಳೀಯರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಸ್‌ಎಫ್ ಮತ್ತು ಜಿಲ್ಲಾ ಪೊಲೀಸ್‌ ಪಡೆಯು ಸದಕ್ತೋಲ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಬಿಎಸ್‌ಎಫ್ ಯೋಧ ಅಖಿಲೇಶ್‌ ರೈ (45) ಹುತ್ಮಾತರಾಗಿದ್ದರು.

ಬಂಧಿತ ನಾಲ್ವರು ನಕ್ಸಲರು ಬಾಂಬ್‌ ಸ್ಫೋಟದ ಘಟನೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT