ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ದಾಳಿ: ಬಿಎಸ್‌ಎಫ್‌ ಯೋಧ ಸಾವು

Published 14 ಡಿಸೆಂಬರ್ 2023, 16:07 IST
Last Updated 14 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಕಂಕೆರ್‌: ಛತ್ತೀಸಗಢದ ಕಂಕೆರ್ ಜಿಲ್ಲೆಯಲ್ಲಿ ಗುರುವಾರ ನಕ್ಸಲರು ನಡೆಸಿದ ಬಾಂಬ್‌ ದಾಳಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಒಬ್ಬ ಯೋಧ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಸ್‌ಎಫ್ ಮತ್ತು ಜಿಲ್ಲಾ ಪೊಲೀಸ್‌ ಪಡೆಯು ಸದಕ್ತೋಲ ಗ್ರಾಮದ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಬಾಂಬ್ ದಾಳಿ ನಡೆದಿದ್ದು, ಬಿಎಸ್‌ಎಫ್ ಯೋಧ ಅಖಿಲೇಶ್‌ ರೈ (45) ಸಾವಿಗೀಡಾಗಿದ್ದಾರೆ. ಬಿಎಸ್‌ಎಫ್‌, ಜಿಲ್ಲಾ ಮೀಸಲು ಪಡೆ ಮತ್ತು ಜಿಲ್ಲಾ ಪೊಲೀಸರಿಂದ ನಕ್ಸಲರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ್ದ ನಾ‌ಡ ಬಾಂಬ್‌ ದಾಳಿಗೆ ಛತ್ತೀಸಗಢ ಸಶಸ್ತ್ರ ಪಡೆಯ ಒಬ್ಬ ಯೋಧ ಬಲಿಯಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT