ದರ್ಗ್ (ಛತ್ತೀಸಗಢ): 'ರಾಧೇ.. ರಾಧೇ..' ಎಂದು ಶುಭ ಕೋರಿದ ಮೂರೂವರೆ ವರ್ಷದ ವಿದ್ಯಾರ್ಥಿನಿಗೆ ಥಳಿಸಿ, ಬಾಯಿಗೆ ಟೇಪ್ ಅಂಟಿಸಿದ ಆರೋಪದಲ್ಲಿ ದರ್ಗ್ ಜಿಲ್ಲೆಯ ಖಾಸಗಿ ಶಾಲೆಯೊಂದರ ಮಹಿಳಾ ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ನಂದಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾಗ್ದುಮರ್ ಗ್ರಾಮದ 'ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆ'ಯಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

'ಹಲ್ಲೆಗೊಳಗಾದ ಬಾಲಕಿಯು, ಶಾಲೆಯ ನರ್ಸರಿಯಲ್ಲಿ ಓದುತ್ತಿದ್ದಾಳೆ. ಧಾರ್ಮಿಕ ಭಾವನೆಗಳಿಗೆ ಅಡ್ಡಿ, ಮಗುವಿನ ಮೇಲೆ ಕ್ರೌರ್ಯ ಹಾಗೂ ಇತರ ಅಪರಾಧಗಳ ಕಾರಣಕ್ಕೆ ಪ್ರಾಂಶುಪಾಲೆ ಇಲಾ ಎವನ್ ಕಾಲ್ವಿನ್ ಅವರನ್ನು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಬಂಧಿಸಲಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಶಾಲೆಯಲ್ಲಿ ಬಾಲಕಿಯು 'ರಾಧೇ.. ರಾಧೇ..' ಎಂದು ಶುಭ ಕೋರಿದ್ದರು. ಇದರಿಂದ ಸಿಟ್ಟಾದ ಪ್ರಾಂಶುಪಾಲೆ ಕಾಲ್ವಿನ್ ಅವರು ಬಾಲಕಿಯನ್ನು ಥಳಿಸಿ, ಬಾಯಿಗೆ ಟೇಪ್ ಅಂಟಿಸಿದ್ದಾರೆ' ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿರುವುದಾಗಿಯೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.