ಪಾಲಕ್ಕಾಡ್: ಐದು ವರ್ಷದ ಬಾಲಕಿಯ ಖಾಸಗಿ ಭಾಗಗಳಿಗೆ ಬರೆ ಹಾಕಿರುವ ಅಮಾನವೀಯ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕಾಗಿ ಬಾಲಕಿಯ ಖಾಸಗಿ ಭಾಗಗಳಿಗೆ ಆಕೆಯ ಮಲತಾಯಿಯೇ ಬರೆ ಹಾಕಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಕಳೆದ ವಾರ ನಡೆದಿದೆ. ಅಂಗನವಾಡಿಗೆ ತೆರಳಿದ್ದ ಬಾಲಕಿ ತರಗತಿಯಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿದ್ದಳು. ಇದನ್ನು ಗಮನಿಸಿದ ಅಂಗನವಾಡಿ ಶಿಕ್ಷಕಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ತನಗಾದ ನೋವನ್ನು ಹೇಳಿಕೊಂಡಿದ್ದಾಳೆ.
. ಎಂಇಎಸ್ ಮುಖಂಡ ಶುಭಂ ಶೆಳಕೆ ಗಡೀಪಾರು ಮಾಡಿ: ಕರ್ನಾಟಕ ರಕ್ಷಣಾ ವೇದಿಕೆ.ಪೆಂಕಾಕ್ ಸಿಲಾಟ್ನಲ್ಲಿ ಕಂಚಿನ ಪದಕ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕ್ರೀಡಾಪಟುಗಳು.
ಈ ಬಗ್ಗೆ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಾಗೂ ಬಾಲ ನ್ಯಾಯ ಕಾಯ್ದೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ತಂದೆಯು ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಆರೈಕೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?! .ಯಾದಗಿರಿ: ಮದ್ಯದ ನಶೆಯಲ್ಲಿ ಕ್ರಿಮಿನಾಶಕ ಕುಡಿದು ವ್ಯಕ್ತಿ ಸಾವು.10 ವರ್ಷಗಳಲ್ಲಿ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ.ಸಂವಹನ ಕೊರತೆಯಿಂದ ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ವಿಫಲ: ಲುಟ್ನಿಕ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.