ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ಮನೆಯಲ್ಲಿ ಅಗ್ನಿ ಅವಘಡ: ಮಗು ಸಾವು, 5 ಮಂದಿ ಗಾಯ

Published 4 ಮೇ 2024, 3:28 IST
Last Updated 4 ಮೇ 2024, 3:28 IST
ಅಕ್ಷರ ಗಾತ್ರ

ಛತ್ರಪತಿ ಸಾಂಭಾಜಿನಗರ (ಮಹಾರಾಷ್ಟ್ರ): ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಕಿರಾದ್‌ಪುರ ಪ್ರದೇಶದ ಶರೀಫ್ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ 8.30ಕ್ಕೆ ಘಟನೆ ನಡೆದಿದೆ. ತನಿಖೆಗೆ ವಿಧಿ ವಿಜ್ಞಾನ ತಂಡವನ್ನುನಿಯೋಜಿಸಲಾಗಿದೆ.

ಮನೆಯಲ್ಲಿ ಏಳು ಮಂದಿ ವಯಸ್ಕರು ಹಾಗೂ 2–3 ಮಕ್ಕಳು ಇದ್ದರು. ಸಿಲಿಂಡರ್‌ ಬ್ಲಾಸ್ಟ್‌ನಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಸದಾಫ್ ಇರ್ಫಾನ್ ಶೇಖ್ (3) ಮೃತಪಟ್ಟರೆ, ರಿಜ್ವಾನ್ ಖಾನ್ (40), ರೆಹಾನ್ ಶೇಖ್ (17), ಆದಿಲ್ ಖಾನ್ (10), ಫೈಜಾನ್ ಪಠಾಣ್ (13) ಮತ್ತು ದಿಶಾನ್ ಖಾನ್ (9) ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT