ನವದೆಹಲಿ: ಗಡಿಯುದ್ದಕ್ಕೂ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ ಮಾರಕ ಘರ್ಷಣೆಗಳು ನಡೆದ ಕೆಲವೇ ದಿನಗಳ ನಂತರ ಮತ್ತು 2020ರಲ್ಲಿ ಜಗತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿದ್ದಾಗ ಚೀನಾ ರಹಸ್ಯವಾಗಿ ಪರಮಾಣು ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ.

ಶುಕ್ರವಾರ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಥಾಮಸ್ ಡಿನಾನ್ನೊ ಈ ಆರೋಪ ಮಾಡಿದ್ದಾರೆ. ಅಮೆರಿಕ ಮತ್ತು ರಷ್ಯಾ ನಡುವಿನ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವು ಕೊನೆಗೊಂಡಿದ್ದು, ಅಧ್ಯಕ್ಷ ಟ್ರಂಪ್ ಭವಿಷ್ಯದ ಯಾವುದೇ ಪರಮಾಣು ಒಪ್ಪಂದಕ್ಕೆ ಚೀನಾವನ್ನು ಬೆಂಬಲಿಸಲು ಉತ್ಸುಕರಾಗಿರುವ ಈ ಸಂದರ್ಭದಲ್ಲಿ ಹೇಳಿಕೆ ಬಂದಿದೆ.

ಈ ಬಗ್ಗೆ ಎಕ್ಸ್ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಅವರು, ಜಾಗತಿಕ ಏಜೆನ್ಸಿಗಳ ಪತ್ತೆಯನ್ನು ತಪ್ಪಿಸಲು ಚೀನಾ ರಹಸ್ಯ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಅಮೆರಿಕಕ್ಕೆ ಮಾಹಿತಿ ಇದೆ ಎಂದು ಡಿನಾನ್ನೊ ಹೇಳಿದ್ದಾರೆ.

2020ರ ಜೂನ್ 22ರಂದು ಚೀನಾ ಅಂತಹ ಒಂದು ಪರಮಾಣು ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿ ಹೇಳಿದ್ದಾರೆ. ಪೂರ್ವ ಲಡಾಖ್ನಲ್ಲಿ ಗಡಿ ಬಿಕ್ಕಟ್ಟಿನ ಮಧ್ಯೆ ಭಾರತ ಮತ್ತು ಚೀನಾದ ಪಡೆಗಳು ಗಾಲ್ವಾನ್ನಲ್ಲಿ ಘರ್ಷಣೆ ನಡೆಸಿದ ಕೇವಲ ಏಳು ದಿನಗಳ ನಂತರ ಈ ಪರೀಕ್ಷೆ ನಡೆಸಿದೆ.

ಉಭಯ ದೇಶಗಳ ಯೋಧರು ಕೈ ಕೈ ಮಿಲಾಯಿಸಿ ನಡೆದ ಕಾಳಗದಲ್ಲಿ ಭಾರತ 20 ಸೈನಿಕರನ್ನು ಕಳೆದುಕೊಂಡಿತ್ತು. ಜಾಗತಿಕ ವರದಿಗಳ ಪ್ರಕಾರ, ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಬಹಿರಂಗಪಡಿಸದ ಚೀನಾ, ಭಾರತಕ್ಕಿಂತ ಹೆಚ್ಚಿನ ಸೈನಿಕರನ್ನು ಕಳೆದುಕೊಂಡಿದೆ.

ಚೀನಾ ಪರಮಾಣು ಪರೀಕ್ಷೆಯ ಬಗ್ಗೆ ಅಮೆರಿಕ ಹೇಳಿದ್ದೇನು?

ಬಹುಶಃ ಭಾರತದ ಗಡಿಯಲ್ಲಿರುವ ಷಿನ್ಜಿಯಾಂಗ್ ಪ್ರದೇಶದ ಲಾಪ್ ನೂರ್ ಸ್ಥಳದಲ್ಲಿ.ಚೀನಾ ‘ಡಿಕೌಪ್ಲಿಂಗ್’ಎಂಬ ತಂತ್ರ ಬಳಸಿ ಪರಮಾಣು ಪರೀಕ್ಷೆ ನಡೆಸಿದೆ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ.

ಡಿಕೌಪ್ಲಿಂಗ್ ಎಂದರರೇನು?

ಪರಮಾಣು ಪರೀಕ್ಷೆ ನಡೆದಾಗ ಉಂಟಾಗುವ ಭೂಕಂಪನದ ರೀತಿಯ ಅಲೆಗಳನ್ನು ತಪ್ಪಿಸಲು ದೊಡ್ಡ ಭೂಗತ ಕುಳಿಯಲ್ಲಿ ಸ್ಫೋಟಕವನ್ನು ನಡೆಸುವ ತಂತ್ರವಾಗಿದೆ. ಜಗತ್ತಿನಿಂದ ಪರೀಕ್ಷೆ ಮರೆಮಾಚಲು ಅಂತಹ ತಂತ್ರ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.