ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಿ ಲೋನ್ ಆ್ಯಪ್: ಪೇಟಿಎಂ ಸೇರಿ ಹಲವು ಪಾವತಿ ಆ್ಯಪ್‌ಗಳ ₹46 ಕೋಟಿ ಮುಟ್ಟಗೋಲು

Last Updated 16 ಸೆಪ್ಟೆಂಬರ್ 2022, 8:37 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ನಿಯಂತ್ರಿತ ಸಾಲದ ಅಪ್ಲಿಕೇಶನ್‌ಗಳು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಈ ವಾರ ನಡೆಸಲಾದ ಸರಣಿ ದಾಳಿಯ ವೇಳೆ, ಪಾವತಿ ಆ್ಯಪ್‌ಗಳಾದ ಈಸ್‌ಬಝ್‌, ರೇಜರ್‌ಪೇ, ಕ್ಯಾಶ್‌ಫ್ರೀ ಮತ್ತು ಪೇಟಿಎಂನ ₹46.67 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ ಹೇಳಿದೆ.

ದೆಹಲಿ, ಮುಂಬೈ, ಗಾಜಿಯಾಬಾದ್, ಲಖನೌ ಮತ್ತು ಗಯಾದಲ್ಲಿ ಸೆಪ್ಟೆಂಬರ್ 14 ರಂದು ಶೋಧ ನಡೆದಿತ್ತು.

‘ಎಚ್‌ಪಿಝಡ್‌’ ಹೆಸರಿನ ಅಪ್ಲಿಕೇಶನ್ ಆಧಾರಿತ ಸಾಲ, ಹೂಡಿಕೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ದೆಹಲಿ, ಗುರುಗ್ರಾಮ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ಜೈಪುರ, ಜೋಧ್‌ಪುರ ಮತ್ತು ಬೆಂಗಳೂರಿನಲ್ಲಿ ಹದಿನಾರು ಬ್ಯಾಂಕ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಸಂಬಂಧಿಸಿದ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿತ್ತು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಗಾಲ್ಯಾಂಡ್‌ನ ಕೊಹಿಮಾ ಸೈಬರ್ ಕ್ರೈಂ ಘಟಕವು 2021ರ ಅಕ್ಟೋಬರ್‌ನಲ್ಲಿ ದಾಖಲಿಸಿದ್ದ ಎಫ್‌ಐಆರ್‌ನಿಂದ ಪ್ರೇರಿತವಾಗಿ ಇ.ಡಿ ಅಕ್ರಮ ಹಣ ವರ್ಗಾವಣೆ ಜಾಡಿನ ಬೆನ್ನುಹತ್ತಿದೆ.

ಶೋಧದ ವೇಳೆ ಹಲವು ಮಹತ್ವದ ದಾಖಲೆಗಳು ದೊರೆತಿರುವುದಾಗಿ ಇ.ಡಿ ತಿಳಿಸಿದೆ.

ಪಾವತಿ ಆ್ಯಪ್‌ಗಳನ್ನು ಹೊಂದಿರುವ ಸಂಸ್ಥೆಗಳ ವರ್ಚುವಲ್‌ ಖಾತೆಗಳಲ್ಲಿ ಭಾರಿ ಹಣ ಪತ್ತೆಯಾಗಿದೆ. ಪುಣೆಯ ‘ಈಸ್‌ಬಝ್‌ ಪ್ರೈವೇಟ್ ಲಿಮಿಟೆಡ್‌’ನಲ್ಲಿ ₹33.36 ಕೋಟಿ, ಬೆಂಗಳೂರಿನ ’ರೇಜರ್‌ಪೇ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌‘ನಲ್ಲಿ ₹8.21 ಕೋಟಿ, ಬೆಂಗಳೂರಿನ ‘ಕ್ಯಾಶ್‌ಫ್ರೀ ಫೇಮೆಂಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ನಲ್ಲಿ ₹1.28 ಕೋಟಿ, ದೆಹಲಿಯ ಫೇಟಿಎಂ ಪೇಮೆಂಟ್‌ ಸರ್ವೀಸ್‌ ಲಿಮಿಟೆಡ್‌ನಲ್ಲಿ ₹1.11 ಕೋಟಿ ಪತ್ತೆಯಾಗಿದೆ ಎಂದು ಇ.ಡಿ ತಿಳಿಸಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT