ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷು ಫೀಹಾಂಗ್‌ ಭಾರತದ ಚೀನಾ ರಾಯಭಾರಿ

Published 7 ಮೇ 2024, 14:26 IST
Last Updated 7 ಮೇ 2024, 14:26 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ತಮ್ಮ ಸರ್ಕಾರದ ಹಿರಿಯ ರಾಜತಂತ್ರಜ್ಞ ಷು ಫೀಹಾಂಗ್‌ ಅವರನ್ನು ಭಾರತಕ್ಕೆ ನೂತನ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ಈ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆಗಳನ್ನು ಚೀನಾ ಮಾಡಿಲ್ಲ. ಆದರೆ, ಚೀನಾದ ವಿದೇಶಾಂಗ ಸಚಿವಾಲಯವು ಪಿಟಿಐ ಸುದ್ದಿಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿದೆ. 

ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸೇನಾ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ರಾಯಭಾರಿ ನೇಮಿಸುವುದನ್ನು ಚೀನಾ 18 ತಿಂಗಳು ವಿಳಂಬ ಮಾಡಿದೆ.

ಷು ಫೀಹಾಂಗ್‌ (60) ಅವರು ಈ ಮೊದಲು ಅಫ್ಗಾನಿಸ್ತಾನ ಮತ್ತು ರೊಮೇನಿಯಾ ದೇಶಗಳಿಗೆ ಚೀನಾದ ರಾಯಭಾರಿಯಾಗಿದ್ದರು. ಸದ್ಯದಲ್ಲೇ ಅವರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಮೊದಲು ಭಾರತದ ಚೀನಾ ರಾಯಭಾರಿಯಾಗಿದ್ದ ಸನ್‌ ವೀಡಂಗ್‌ ಅವರ ಕರ್ತವ್ಯಾವಧಿಯು 2022ರ ಅಕ್ಟೋಬರ್‌ನಲ್ಲಿ ಮುಕ್ತಾಯವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT