ಕೊಚ್ಚಿ (ಪಿಟಿಐ): ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯು (ಸಿಐಎಎಲ್) ಶೀಘ್ರದಲ್ಲಿಯೇ ಮೈಸೂರು ಸೇರಿದಂತೆ ನಾಲ್ಕು ನಗರಗಳಿಗೆ ವೈಮಾನಿಕ ಸೇವೆ ಆರಂಭಿಸಲಿದೆ.
ಕೊಚ್ಚಿಯಿಂದ ಮೈಸೂರು, ಕಣ್ಣೂರು, ತಿರುಚ್ಚಿ, ತಿರುಪತಿಗೆ ವೈಮಾನಿಕ ಸೇವೆ ಆರಂಭವಾಗಲಿದೆ. ಬಹುಶಃ ಜನವರಿ ಅಂತ್ಯದೊಳಗೆ ಸೇವೆ ಆರಂಭವಾಗಲಿದೆ ಎಂದು ಸಿಐಎಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಅಲೈಯನ್ಸ್ ಏರ್ ಸಂಸ್ಥೆಯು ಸೇವೆ ಆರಂಭಿಸಲಿದ್ದು, ಕೊಚ್ಚಿಯಿಂದ ತಿರುಚ್ಚಿ ವೈಮಾನಿಕ ಸೇವೆಯನ್ನು ಚೆನ್ನೈಗೆ ವಿಸ್ತರಿಸಲಾಗುತ್ತದೆ. ಇದು, ಪ್ರಾದೇಶಿಕ ಸಂಪರ್ಕ, ಪ್ರವಾಸೋದ್ಯಮದ ಚೇತರಿಕೆಗೆ ನೆರವಾಗಲಿದೆ ಎಂದು ತಿಳಿಸಿದೆ.