ಪಿಲಿಭಿತ್ (ಉತ್ತರ ಪ್ರದೇಶ): ಇಲ್ಲಿನ ಜಹಾನಾಬಾದ್ ಪ್ರದೇಶದ ಮಸೀದಿಯಲ್ಲಿ ಅನುಮತಿ ಪಡೆಯದೆ, ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಮೌಲ್ವಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಕಾಜಿಟೊಲಾದ ಮಸೀದಿಯಲ್ಲಿ ಮಾ. 1ರಂದು ‘ನಮಾಜ್’ ವೇಳೆ ಧ್ವನಿವರ್ಧಕ ಬಳಸಿ ‘ಆಜಾನ್’ ಕೂಗಿದ ಆರೋಪದ ಮೇಲೆ ಮೌಲ್ವಿ ಅಶ್ಫಕ್ ವಿರುದ್ಧ ಸಬ್ ಇನ್ಸ್ಪೆಕ್ಟರ್ ವರುಣ್ ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಜಹಾನಾಬಾದ್ ಠಾಣಾಧಿಕಾರಿ ಮನೋಜ್ಕುಮಾರ್ ಮಿಶ್ರಾ ತಿಳಿಸಿದ್ದಾರೆ.

‘ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ, ಧ್ವನಿವರ್ಧಕ ಬಳಸುವಂತಿಲ್ಲ. ಫೆ.28ರ ರಾತ್ರಿ ವೇಳೆ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ‘ನಮಾಜ್’ ಹಾಗೂ ‘ಆಜಾನ್’ ಕೂಗಿದ್ದರು. ಈ ವೇಳೆ ವಿಚಾರಿಸಿದಾಗ ಮೌಲ್ವಿ ಅವರು ಯಾವುದೇ ಅನುಮತಿ ಪತ್ರ ನೀಡಿರಲಿಲ್ಲ. ಎಚ್ಚರಿಸಿದ ನಂತರವೂ ಧ್ವನಿವರ್ಧಕ ಬಳಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಈಗ 10 ಹಾಗೂ 12ನೇ ತರಗತಿ ಪರೀಕ್ಷೆ ನಡೆಯುತ್ತಿದ್ದು, ಧ್ವನಿವರ್ಧಕ ಬಳಸುವುದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ತೊಂದರೆಯಾಗುತ್ತದೆ’ ಎಂದು ಮಿಶ್ರಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.