ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಬಂಗಾಳ | ಸರ್ವಧರ್ಮ ಸಮನ್ವಯ ರ‍್ಯಾಲಿಗೆ ಚಾಲನೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ

Published 22 ಜನವರಿ 2024, 11:32 IST
Last Updated 22 ಜನವರಿ 2024, 11:32 IST
ಅಕ್ಷರ ಗಾತ್ರ

ಕೋಲ್ಕತ್ತ: ‍ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಸೋಮವಾರ) ಮಧ್ಯಾಹ್ನ ಸರ್ವಧರ್ಮ ಸಮನ್ವಯ ರ‍್ಯಾಲಿಗೆ ಚಾಲನೆ ನೀಡಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನೇರವೇರಿದ ಸಮಯದಲ್ಲೇ ನಗರದ ಕಾಳಿಘಾಟ್‌ ದೇವಸ್ಥಾನದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಬ್ಯಾನರ್ಜಿ ರ‍್ಯಾಲಿಯನ್ನು ಪ್ರಾರಂಭಿಸಿದರು.

ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ತೃಣಮೂಲ ಕಾಂಗ್ರೆಸ್‌ನ ನಾಯಕರು ಸೇರಿದಂತೆ ಹಲವು ನಾಯಕರೊಂದಿಗೆ ನಗರದ ಹಜ್ರಾ ಮೋರ್‌ನಿಂದ ‘ಸಂಗತಿ ಮಾರ್ಚ್‌’ ಆರಂಭಿಸಿದರು.

ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಬಿಜೆಪಿಯ ಲೋಕಸಭಾ ಚುನಾವಣೆಯ ಗಿಮಿಕ್‌ ಶೋ ಎಂದು ಬ್ಯಾನರ್ಜಿ ಟೀಕಿಸಿದ್ದರು.

ಹಜ್ರಾ ಮೋರ್‌ನಿಂದ ರ‍್ಯಾಲಿಯನ್ನು ಪ್ರಾರಂಭಿಸಿರುವ ಬ್ಯಾನರ್ಜಿ, ಮಸೀದಿಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳು ಸೇರಿದಂತೆ ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ವಿವಿಧ ಪೂಜಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ನಗರದ ಪಾರ್ಕ್‌ ಸರ್ಕಸ್‌ ಮೈದಾನದಲ್ಲಿ ಬೃಹತ್‌ ಸಮಾವೇಶದೊಂದಿಗೆ ರ‍್ಯಾಲಿ ಸಮಾಪ್ತಿಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT