ಚೆನ್ನೈ: 1998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ ಹೇಳಿದೆ.

ಕೊಯಮತ್ತೂರು ಸ್ಫೋಟದಲ್ಲಿ 58 ಜನ ಮೃತರಾಗಿ 250 ಜನ ಗಾಯಗೊಂಡಿದ್ದರು.

ಸಾದಿಕ್, ತಮಿಳುನಾಡಿನಾದ್ಯಂತ ನಡೆದ ಹಲವು ಹತ್ಯೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದು, 26 ವರ್ಷಗಳ ಹಿಂದೆ ಅಂದರೆ 1996ರಲ್ಲಿ ತಲೆಮರೆಸಿಕೊಂಡಿದ್ದ.

ಸಾದಿಕ್ ಕೊಯಮತ್ತೂರು ಮೂಲದವನಾಗಿದ್ದು, ರಾಜಾ, ಟೇಲರ್ ರಾಜಾ, ವಲರಂತ ರಾಜಾ, ಶಹಜಹಾನ್ ಅಬ್ದುಲ್ ಮಜೀದ್ ಮಕಂದರ್ ಮತ್ತು ಶಹಜಹಾನ್ ಶೇಖ್ ಹೀಗೆ ಹಲವು ಹೆಸರುಗಳನ್ನು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ.

'ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ. ವಿಜಯಪುರದಲ್ಲಿ ಟೇಲರ್ ರಾಜಾ ಎನ್ನುವ ಹೆಸರಿನಲ್ಲಿದ್ದ ಸಾದಿಕ್ ವಾಸಿಸುತ್ತಿದ್ದ" ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈತ 1996ರಲ್ಲಿ ನಡೆದ ಪೆಟ್ರೋಲ್ ಬಾಂಬ್ ಸ್ಫೋಟ, 1996ರಲ್ಲಿ ನಗೋರ್ನಲ್ಲಿ ನಡೆದ ಸಯೀತಾ ಹತ್ಯೆ ಪ್ರಕರಣ, 1997ರಲ್ಲಿ ಮಧುರೈನಲ್ಲಿ ನಡೆದ ಜೈಲರ್ ಜಯಪ್ರಕಾಶ್ ಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.